ಮಂಗಳೂರು: ರಾಹುಲ್ ಗಾಂಧಿಯವರ ಓಟ್ ಚೋರಿ ಅಭಿಯಾನಕ್ಕೆ ಬಿಹಾರದ ಜನತೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಹೆಗಲು ಹಿಡ್ಕೊಂಡು ಹೋದವರು ಸರ್ವನಾಶ ಆಗುತ್ತಾರೆ ಎನ್ನುವುದಕ್ಕೆ ಈ ಚುನಾವಣೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಬಿಜೆಪಿ- ಜೆಡಿಯು ಭರ್ಜರಿ ಗೆಲುವು ಸಾಧಿಸಿರುವುದರ ಹಿನ್ನೆಲೆ ಮಂಗಳೂರಿನ ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ, ಸಂಭ್ರಮಿಸಿದ ಅವರು, ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದರು.
ಇವತ್ತು ಬಹಳ ಖುಷಿಯಾಗಿದೆ. ಮತ್ತೊಂದು ಸಾರಿ ಮೋದಿ ಡಬಲ್ ಇಂಜಿನ್ ಸರ್ಕಾರಕ್ಕೆ ಜಯ ಸಿಕ್ಕಿದೆ. ಯಾವ ಅಪಪ್ರಚಾರವನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶ-ಪ್ರಪಂಚದಾದ್ಯಂತ ಮಾಡ್ತಾ ಇದ್ರು, ಕಳೆದ ಲೋಕಸಭಾ ಅಧಿವೇಶವನ್ನು ಎಸ್‌ಐಆರ್ ಕಾರಣಕ್ಕೆ ಸ್ಥಗಿತ ಮಾಡಿದ್ದರು, ಯಾವುದೇ ಚರ್ಚೆಯಲ್ಲಿ ಅವರು ಭಾಗವಹಿಸದೆ ಹೋರಾಟ ಮಾಡಿದ್ರು. ಅದಕ್ಕೆ ತಕ್ಕುದಾದ ಉತ್ತರವನ್ನು ಬಿಹಾರದ ಜನತೆ ಕೊಟ್ಟಿದ್ದಾರೆ ಎಂದರು.

ಇಂದು ಎಲ್ಲದಕ್ಕಿಂತ ದೊಡ್ಡ ಜಯವನ್ನು ಬಿಜೆಪಿ- ಹಾಗೂ ನಿತೀಶ್ ಕುಮಾರ್ ಅವರ ಪಾರ್ಟಿ ಜೆಡಿಯುಗೆ ಬಿಹಾರದ ಜನ ಆಶೀರ್ವಾದ ಮಾಡಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ನಿತೀಶ್ ಕುಮಾರ್ ಅವರನ್ನು ಅಭಿನಂದಿಸುತ್ತೇನೆ. ಅಪಪ್ರಚಾರಕ್ಕೆ ದೇಶದ ಜನ ತಕ್ಕ ಉತ್ತರವನ್ನು ಕೊಡ್ತಾರೆ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ ಎಂದು ಶೋಭಾ ಹೇಳಿದರು.
ಚುನಾವಣೆ ಆಯೋಗ ಬಿಎಲ್‌ಎ1 ಬಿಎಲ್‌ಎ2 ಕೇಳಿದ್ದಾರೆ. ಕೇವಲ ಭಾರತೀಯ ಜನತಾ ಪಾರ್ಟಿಯ ಓಟನ್ನು ಸರಿ ಮಾಡಲಿಕ್ಕಲ್ಲ, ಎಲ್ಲ ಪಾರ್ಟಿಗಳಿಗೆ ಕೂಡ ಅವಕಾಶ ಇದೆ. ಅವರವರ ಬೂತಲ್ಲಿ ಬಿಎಲ್‌ಎ1 ಬಿಎಲ್‌ಎ2 ಗಳು ಈ ಓಟನ್ನು ಗಮನಿಸಬೇಕು. ಯಾರು ಸತ್ತಿದ್ದಾರೆ, ಯಾರು ಹೊರ ಹೋಗಿದ್ದಾರೆ, ಯಾರ ಓಟು ಮೈನಸ್ ಆಗಿದೆ, ನಮ್ಮ ಬೂತಲ್ಲಿ ಎಷ್ಟು ಓಟಿದೆ, ಇದನ್ನು ಗಮನಿಸುವಂಥಾ ಅಧಿಕಾರ ಬಿಎಲ್‌ಎಗಳಿಗೆ ಇದೆ. ಬಿಜೆಪಿ, ಜಿಎಡಿಯುನ ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರತಿ ಬೂತಲ್ಲಿ ನಮ್ಮ ಪರಿವಾರದ ಎಲ್ಲ ಕಾರ್ಯಕರ್ತರು ಸೇರಿ ಓಟರ್ ಲಿಸ್ಟನ್ನು ಸರಿ ಮಾಡುವ ಕೆಲಸ ಮಾಡಿದ್ವಿ. ಕಾಂಗ್ರೆಸ್ ಕಾರ್ಯಕರ್ತರು ಏನ್ಮಾಡ್ತಾ ಇದ್ರು? ನಿಮಗೆ ಜವಾಬ್ದಾರಿ ಇಲ್ವಾ? ನಿಮ್ಮ ಬಿಎಲ್‌ಎಗಳಿಗೆ ನೀವು ಯಾಕೆ ಕೆಲಸ ಹಚ್ಚಿಲ್ಲ? ಅವರು ನಮ್ಮ ಬೂತಲ್ಲಿ ಇಷ್ಟು ಓಟು ಇಲ್ಲ ಅಂತ ಹೇಳ್ಬೇಕಲ್ವಾ? ಎಂದು ಕುಟುಕಿದರು.
ಇಷ್ಟು ಓಟು ಆಗಿದೆ, ಇಷ್ಟು ಓಟು ಇದೆ? ಇದನ್ನು ಅವರು ಹೇಳ್ಬೇಕಲ್ವಾ? ಚುನಾವಣಾ ಆಯೋಗ ರಾಹುಲ್ ಗಾಂಧಿಯವರಿಗೆ ಸ್ಪಷ್ಟವಾಗಿ ಹೇಳಿತ್ತು, ನೀವು ಕಂಪ್ಲೈಂಟ್ ಕೊಡಿಮ, ದೃಡೀಖರಣ ಮಾಡಿ. ದೃಢೀಕರಣ ಮಾಡಲು ರಾಹುಲ್ ಗಾಂಧಿಯವರಿಗೆ ಯಾಕೆ ಹೆದರಿಕೆ? ಕೇವಲ ಹಿಟ್ ಆಂಡ್ ರನ್ ಮಾತ್ರ ರಾಹುಲ್ ಅವರು ದೇಶದಾದ್ಯಂತ ಮಾಡ್ತಾ ಇದ್ದಾರೆ. ಸುಳ್ಳು ಹೇಳಿ ಓಡಿ ಹೋಗುವ ರಾಹುಲ್ ಗಾಂಧಿಯನ್ನು ದೇಶದ ಜನತೆಗೆ ಒಪ್ಪುವುದಿಲ್ಲ. ಅತ್ಯಂತ ಪ್ರಾಮಾಣಿಕವಾಗಿ ಚುನಾವಣೆ ನಡೆದಿದೆ. ಚುನಾವಣೆ ಆಯೋಗ ಅಲ್ಲಿನ ಪ್ರತಿ ಹಿರಿಯರನ್ನು ಹೋಗಿ ಕೇಳಿದೆ ನಿಮ್ಮಲ್ಲಿ ಏನಾದ್ರೂ ಕಂಪ್ಲೈಂಟ್ ಇದ್ರೆ ಕೊಡಿ, ನಾವದನ್ನು ಸರಿ ಮಾಡ್ತೇವೆ ಅಂತ ಹೇಳಿತ್ತು. ಒಬ್ಬರೂ ಒಬ್ರು ಕಂಪ್ಲೈಂಟ್ ಮಾಡಿಲ್ಲ. ಅಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಚುನಾವಣೆ, ನಡೆದಿದೆ. ಬಿಹಾರದ ಜನತೆ ನಮಗೆ ಆಶೀರ್ವಾದ ಮಾಡಿದ್ರು ಎಂದರು
ಅಲ್ಲಿ ಬೇರೆ ಪಕ್ಷ ಗೆದ್ದಾಗ ಇದೇ ಪ್ರಶ್ನೆಯನ್ನು ನೀವು ತೆಲಂಗಾಣದಲ್ಲಿ ಯಾಕೆ ಕೇಳಲಿಲ್ಲ? ಕರ್ನಾಟಕದಲ್ಲಿ 135 ಸೀಟ್ ಗೆದ್ದಾಗ ಕೇಳಲಿಲ್ಲಿ. ಬೇರೆ ರಾಜ್ಯದಲ್ಲಿ ಗೆದ್ದಾಗಲೂ ಕೇಳಲಿಲ್ಲ. ಹಾಗಾದ್ರೆರ ಕರ್ನಾಟಕದಲ್ಲಿ ಕಾಂಗ್ರೆಸ್ ಓಟು ಚೋರಿ ಮಾಡಿತ್ತಾ? ನಿಮ್ಮ ನಾಯಕ ಫೈಲ್ಯೂರ್ ಆಗ್ತಾ ಇದ್ದಾರೆ ದೇಶ ವಿದೇಶದಲ್ಲಿ ಜನ ಬೇಸತ್ತಿದ್ದಾರೆ. ಯಾವ ತೇಜಸ್ವಿ ಯಾದವ್? ಅವರ ಅಪ್ಪ ಇದ್ದಾಗ ಪಕ್ಷ ಕಟ್ಟಿದ್ರು ಆದ್ರೆ ಮಗನ್ದು ಏನಿದೆ? ನೀವು ರಾಹುಲ್ ನ ಹೆಗಲು ಹಿಡ್ಕೊಂಡು ಹೋದ್ರಿ, ಸರ್ವನಾಶ ಆದ್ರಿ. ಅದಕ್ಕೆ ಈಗ ಚುನಾವಣಾ ಆಯೋಗದ ಮೇಲೆ ಅನವಶ್ಯಕ ಆರೋಪ ಮಾಡಿದ್ದಾರೆ. ಇದನ್ನು ದೇಶದ ಜನತೆ ಒಪ್ಪಲ್ಲ ಎಂದರು.
ರಾಜ್ಯದಲ್ಲಿ ಸಿದ್ದುಗೆ 135 ಸೀಟ್ ಹೇಗೆ ಬಂತು ಉತ್ತರ ಕೊಡಿ, ನೀವು ಗೆದ್ದಾಗ ಸರಿ ಇದೆ ಬಿಜೆಪಿ ಗೆದ್ದಾಗ ಸರಿ ಇಲ್ಲ. ಇದನ್ನು ದೇಶದ ಜನತೆ ಒಪ್ಪಲ್ಲ. ಕರ್ನಾಟಕ ಅಭಿವೃದ್ಧಿ ಮುಖ್ಯಮಂತ್ರಿ ಅವಶ್ಯಕವಲ್ಲ ಎಂದು ಶೋಭಾ ಆರೋಪಿಸಿದ್ದಾರೆ.
ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಿದ ಅವರು, ಅವರು ಯಾರು ಬೇಕಾದ್ರೂ ಮುಖ್ಯಮಂತ್ರಿ ಮಾಡ್ಲಿ. ಅದು ಅವರ ಆಂತರಿಕ ವಿಚಾರ. ಗ್ಯಾರಂಟಿ ವಿಚಾರದಲ್ಲಿ ರಾಜ್ಯವನ್ನು ಲೂಟಿ ಮಾಡಿದ್ರಿ ಗುಂಡಿ ಬಿದ್ದು ಜನ ಸಾಯ್ತಾ ಇದ್ದಾರೆ, ಬೆಲೆ ಏರಿಕೆ ಆಗಿದೆ. ರೋಡ್ ರಿಪೇರಿ ಮಾಡ್ಕಿಕ್ಕೆ ಹಣ ಇಲ್ಲ, ಕಬ್ಬಯು ಬೆಳೆಗಾರರು ಸಾಯ್ತಾ ಇದ್ದಾರೆ. ನೆರೆ ಪರಿಹಾರ ಕೊಟ್ಟಿಲ್ಲ. ಪೆಟ್ರೋಲ್, ವಿದ್ಯುತ್, ಕಸ ಎಲ್ಲದರ ರೇಟ್ ಜಾಸ್ತಿ ಮಾಡಿದ್ರಿ. ಅದರ ಹಣ ಎಲ್ಲಿಗೆ ಹೋಗ್ತಾ ಇದೆ ಎಂದು ಪ್ರಶ್ನಿಸಿದರು.
ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಉಸ್ತುವಾರಿಗಳು ಮೀಟಿಂಗ್ ಮಾಡಿಲ್ಲ. ಸಿದ್ದು ಮಾತ್ರ ಚಾಪರ್ ನಲ್ಲಿ ಹೋಗ್ತಾ ಇದ್ದಾರೆ. ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ನವೆಂಬರ್ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆ, ಆರೆಸ್ಸೆಸ್ ನಿಷೇಧ, ಹೀಗೆ ನಾನಾ ಕಥೆ ಹೇಳುತ್ತಿದ್ದಾರೆ. ಇದನ್ನು ಜನ ಮರೆಯೋಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ವೇಳೆ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತಿತರರು ಇದ್ದರು.