ಮಂಗಳೂರು: ಉಳ್ಳಾಲ ವ್ಯಾಪ್ತಿಯ ಕುಂಪಲದ ಬಳಿ ರಕ್ತಸಿಕ್ತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದ್ದು, ಕಾಡುಪ್ರಾಣಿ ದಾಳಿಯ ಶಂಕೆ ವ್ಯಕ್ತವಾಗಿದೆ. ರಾಮ ಗಟ್ಟಿ ಅವರ ಪುತ್ರ ದಯಾನಂದ (60) ನಿಗೂಢವಾಗಿ ಮೃತಪಟ್ಟವರು.

ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಳಿಗ್ಗೆ ಸುಮಾರು 3 ಗಂಟೆಯ ವೇಳೆಗೆ ಸ್ಥಳೀಯರು ದಯಾನಂದರನ್ನು ನಡೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದರು. ಬಳಿಕ ಕೆಲ ಗಂಟೆಗಳಲ್ಲೇ ಅವರು ಮೃತಪಟ್ಟಿರುವುದು ಕಂಡುಬಂದಿದೆ.
ಘಟನಾ ಸ್ಥಳದಲ್ಲಿ ಕಂಡುಬಂದ ಗಾಯಗಳ ಸ್ವರೂಪದಿಂದ ಕಾಡುಪ್ರಾಣಿಯ ದಾಳಿಯ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ನಿಖರವಾದ ಮರಣ ಕಾರಣ ಇನ್ನೂ ಸ್ಪಷ್ಟವಾಗಬೇಕಿದೆ.

ಘಟನೆ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮುಂದುವರೆಸಿದ್ದು, FSL ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಜೊತೆಗೆ ಫರೆನ್ಸಿಕ್ ವೈದ್ಯರನ್ನು ಸಹ ಮರಣೋತ್ತರ ಪರೀಕ್ಷೆ ಮತ್ತು ತಾಂತ್ರಿಕ ಅಭಿಪ್ರಾಯಕ್ಕಾಗಿ ಮನವಿ ಮಾಡಲಾಗಿದೆ.
ಪೊಲೀಸರು ಎಲ್ಲಾ ಸಾಧ್ಯತೆಗಳತ್ತ ಗಮನಹರಿಸಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳು ನಂತರ ಬಹಿರಂಗವಾಗುವ ಸಾಧ್ಯತೆ ಇದೆ.