ಸಾಲು ಮರದ ತಿಮ್ಮಕ್ಕನಿಗೆ ಸಚಿವೆ ಶೋಭಾ ಕರಂದ್ಲಾಜೆ ಸಂತಾಪ

ಮಂಗಳೂರು: ಸಾಲು ಮರದ ತಿಮ್ಮಕ್ಕನಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದ್ದಾರೆ.

ಇಂದು ಮಂಗಳೂರಿನಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತಾಡಿದ ಅವರು, ಇಂದು ನಮ್ಮನ್ನಗಲಿದ ಒಬ್ಬ ಸಾಮಾನ್ಯ ಮಹಿಳೆ ದೇಶದ ಕೆಲಸದಲ್ಲಿ ಕೈ ಜೋಡಿಸಬಹುದು ಎನ್ನುವುದನ್ನು ಎಲ್ಲರಿಗೂ ತೋರಿಸಿಕೊಟ್ಟರು. ನಮ್ಮ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಿದೆ. ಇವತ್ತು ಅವರ ಪ್ರೇರಣೆಯಿಂದ ಲಕ್ಷಾಂತರ ಮಂದಿ ಅವರವರ ಜಾಗದಲ್ಲಿ ಗಿಡ ಬೆಳೆಸುವುದನ್ನು ಆರಂಭ ಮಾಡಿದ್ದಾರೆ. ಇದೇ ಅವರು ನಮಗೆ ಕೊಟ್ಟಂತಹ ಪ್ರೇರಣೆ. ಭಾರತೀಯ ಜನತಾ ಪಾರ್ಟಿ ಅವರಿಗೆ ನಮನ ಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ ಎಂದಿದ್ದಾರೆ.

error: Content is protected !!