ದೆಹಲಿಯಲ್ಲಿ 26/11 ಮಾದರಿ ದಾಳಿಗೆ ಸಂಚು: ಕೆಂಪುಕೋಟೆ, ಇಂಡಿಯಾ ಗೇಟ್, ಸಂವಿಧಾನ ಭವನ, ಗೌರಿ ಶಂಕರ ದೇವಸ್ಥಾನ ಟಾರ್ಗೆಟ್!

ನವದೆಹಲಿ: ಕೆಂಪುಕೋಟೆ ಸಮೀಪ ನವೆಂಬರ್ 10ರಂದು ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ ನಂತರ, ತನಿಖಾ ಸಂಸ್ಥೆಗಳು ಈ ಘಟನೆಯ ಹಿಂದಿರುವ ಮುಂಬೈ 26/11 ಮಾದರಿಯ ಉಗ್ರ ಸಂಚು ಪತ್ತೆಹಚ್ಚಿವೆ. ಮೂಲಗಳ ಪ್ರಕಾರ, ಉಗ್ರರು ಕೆಂಪುಕೋಟೆ, ಇಂಡಿಯಾ ಗೇಟ್, ಸಂವಿಧಾನ ಭವನ, ಗೌರಿ ಶಂಕರ ದೇವಸ್ಥಾನ, ಸೇರಿದಂತೆ ದೆಹಲಿಯ ಪ್ರಮುಖ ಸ್ಮಾರಕಗಳನ್ನು ಗುರಿಯಾಗಿಸಿ ಸರಣಿ ದಾಳಿಗೆ ಯೋಜನೆ ರೂಪಿಸಿದ್ದರು.

ತನಿಖಾ ಮೂಲಗಳ ಪ್ರಕಾರ, ಈ ಸಂಚು ಜನವರಿ ತಿಂಗಳಿನಿಂದಲೇ ನಡೆಯುತ್ತಿತ್ತು. ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಈ ದಾಳಿಯಲ್ಲಿ ಇದೆ ಎಂದು ಶಂಕಿಸಲಾಗಿದೆ. ಉಗ್ರರು ಸುಮಾರು 200 ಐಇಡಿ ಬಾಂಬ್‌ಗಳನ್ನು ತಯಾರಿಸಿ, ದೆಹಲಿ, ಗುರುಗ್ರಾಮ ಹಾಗೂ ಫರೀದಾಬಾದ್‌ನ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲು ಯೋಜಿಸಿದ್ದರು.

ಉಗ್ರರು ಧಾರ್ಮಿಕ ತಾಣಗಳನ್ನು ಗುರಿಯಾಗಿಸಿ ಜನರಲ್ಲಿ ಭಯ ಹಾಗೂ ಉದ್ವಿಗ್ನತೆ ಉಂಟುಮಾಡಲು ಯತ್ನಿಸುತ್ತಿದ್ದರು. ಈ ಕಾರ್ಯಾಚರಣೆಗೆ ಪುಲ್ವಾಮಾ, ಶೋಪಿಯನ್ ಮತ್ತು ಅನಂತನಾಗ್ ಪ್ರದೇಶದ ವೈದ್ಯರನ್ನು ಆಯ್ಕೆ ಮಾಡಲಾಗಿತ್ತು. ಇವರು ವೈದ್ಯಕೀಯ ವೃತ್ತಿಯ ಮುಖವಾಡದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಫರೀದಾಬಾದ್‌ನ ಧೌಜ್ ಮತ್ತು ಫತೇಹ್ಪುರ್ ತಾಗಾ ಪ್ರದೇಶಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ತೆಗೆದುಕೊಂಡು ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು.

ತನಿಖಾ ಸಂಸ್ಥೆಗಳು ಡಾ. ಶಾಹೀನ್ ಸಯೀದ್, ಡಾ. ಮುಜಮ್ಮಿಲ್ ಶಕೀಲ್ ಗಣಾಲೆ ಹಾಗೂ ಡಾ. ಅದೀಲ್ ರಾದರ್ ನನ್ನು ಬಂಧಿಸಿದ್ದಾರೆ. ಸ್ಫೋಟದಲ್ಲಿ ಸಾವನ್ನಪ್ಪಿದ ಆತ್ಮಹತ್ಯಾ ಬಾಂಬರ್ ಡಾ. ಉಮರ್ ನಬಿ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ಶಂಕಿಸಲಾಗಿದೆ. ಇನ್ನೂ ಮೂವರು ವೈದ್ಯರನ್ನು ವಿಚಾರಣೆಗೊಳಪಡಿಸಲಾಗಿದ್ದು, ಅವರಿಗೆ ಬಿಡುಗಡೆ ಸಿಗುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.

 

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಕಾರು ಸ್ಫೋಟದಿಂದ ಆತಂಕ
ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಹ್ಯುಂಡೈ ಐ20 ಕಾರು ಸ್ಫೋಟಗೊಂಡು ಒಂಬತ್ತು ಮಂದಿ ಸಾವನ್ನಪ್ಪಿದ್ದು, ಸುಮಾರು ಇಪ್ಪತ್ತು ಮಂದಿ ಗಾಯಗೊಂಡಿದ್ದಾರೆ. ಸಂಜೆಯ ಟ್ರಾಫಿಕ್ ಸಮಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳು ಘಟನೆಯ ಭೀಕರತೆಯನ್ನು ತೋರಿಸುತ್ತವೆ.

ದೀಪಾವಳಿಯಲ್ಲೇ ದಾಳಿ ಯೋಜನೆ ವಿಫಲ
ಉಗ್ರರು ಮೊದಲು ದೀಪಾವಳಿ ಸಂದರ್ಭದಲ್ಲಿ ಜನಸಂದಣಿ ಪ್ರದೇಶದಲ್ಲಿ ದಾಳಿ ನಡೆಸಲು ಯೋಜಿಸಿದ್ದರು, ಆದರೆ ಅದು ವಿಫಲವಾಯಿತು. ಬಂಧಿತ ಮುಜಮ್ಮಿಲ್ ಶಕೀಲ್ ಗಣಾಲೆನಿಂದ 2,900 ಕಿಲೋಗ್ರಾಂ ಸ್ಪೋಟಕ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಡಾ. ಶಾಹೀನ್ ಸಯೀದ್ ಅವರ ಕಾರಿನಲ್ಲಿ ಬಂದೂಕು ಮತ್ತು ಗುಂಡುಗಳು ಪತ್ತೆಯಾದ ನಂತರ ಬಂಧಿಸಲಾಯಿತು.
ತನಿಖೆಯಿಂದ ಅವರು ಜೈಶ್-ಇ-ಮೊಹಮ್ಮದ್ ಸಂಘಟನೆಯ ಮಹಿಳಾ ವಿಭಾಗ ʻಜಮಾತ್ ಉಲ್ ಮೊಮಿನಾತ್ʼ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದರೆಂಬುದು ಬಹಿರಂಗವಾಗಿದೆ. ಈ ಪ್ರಕರಣದಿಂದ ಉಗ್ರ ಸಂಘಟನೆಗಳು ಈಗ ವೈದ್ಯರು, ಇಂಜಿನಿಯರ್‌ಗಳು ಮುಂತಾದ ವೃತ್ತಿಪರರನ್ನು ಬಳಸಿಕೊಂಡು ಉಗ್ರ ಚಟುವಟಿಕೆ ಮುಚ್ಚಿಹಾಕುವ ತಂತ್ರ ಅಳವಡಿಸಿಕೊಂಡಿವೆ ಎಂಬ ಆತಂಕಕಾರಿ ವಾಸ್ತವತೆ ಬೆಳಕಿಗೆ ಬಂದಿದೆ.

error: Content is protected !!