ಮಂಗಳೂರು: ಮುಲ್ಕಿ ತಾಲೂಕಿನ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಪಡುಪಣಂಬೂರಿನಲ್ಲಿ ನವೆಂಬರ್ 14ರಂದು (ಶುಕ್ರವಾರ) ಬೆಳಿಗ್ಗೆ 9.30ಕ್ಕೆ ಅಡುಗೆಕೋಣೆ, ಶಿಕ್ಷಕರ ಕೊಠಡಿ, 20 ಆಧುನಿಕ ಬೆಂಚುಗಳು ಹಾಗೂ ಹೊರಾಂಗಣ ಆಟದ ಸಲಕರಣೆಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.

ಈ ಸೌಲಭ್ಯಗಳನ್ನು ದಿ| ಬೆಳ್ಳಾಯರು ಜನಾರ್ದನ ಶೆಟ್ಟಿಗಾರ್ (ಕಾಂತಣ್ಣ ಗುರಿಕಾರ್) ಹಾಗೂ ದಿ| ಕುಸುಮ ಜನಾರ್ದನ ಶೆಟ್ಟಿಗಾರ್ ಸ್ಮರಣಾರ್ಥ ಡೈನಾಟೆಕ್ ಟೂಲ್ಸ್ ಅಂಡ್ ಡಿವೈಸಸ್ (ಬೆಂಗ್ಳೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಕೇರ್ ಟ್ರಸ್ಟ್ (CARE Trust) ಮೂಲಕ ಶಾಲೆಗೆ ಒದಗಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರು ಎಂ. ದುಗ್ಗಣ್ಣ ಸಾವಂತರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಪಡುಪಣಂಬೂರು ಅಧ್ಯಕ್ಷೆ ಕುಸುಮ ಚಂದ್ರಶೇಖರ್, ಕೇರ್ ಟ್ರಸ್ಟ್ ಅಧ್ಯಕ್ಷ ಮನೋಜ್ ಕುಮಾರ್, ಸಹ ಕಾರ್ಯದರ್ಶಿ ಆನಂದ್ ಹರಿಹರ, ಡೈನಾಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ. ದಾಮೋದರ್, ನಿರ್ದೇಶಕಿ ವತ್ಸಲಾ ದಾಮೋದರ್, ಬಿ. ರತ್ನಾಕರ ಶೆಟ್ಟಿಗಾರ್ (ಕಾಂತಣ್ಣ ಗುರಿಕಾರ್), ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನ ಕಲ್ಲಾಪು ಪ್ರತಿನಿಧಿಗಳು, ಬಿಇಓ ಮಂಗಳೂರು ಉತ್ತರ ವಲಯ ಶ್ರೀ ಜೇಮ್ಸ್ ಕುಟ್ಟಿನೊ, ಕಟ್ಟಡ ಸಮಿತಿ ಅಧ್ಯಕ್ಷ ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಎಸ್‌ಡಿಎಂಸಿ ಅಧ್ಯಕ್ಷೆ ರೂಪಕಲಾ ಭಾರ ಮುಖ್ಯೋಪಾಧ್ಯಾಯಿನಿ ಸುಕನ್ಯದೇವಿ, ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ ಉಪಸ್ಥಿತರಿರಲಿದ್ದಾರೆ.
ಈ ಕಾರ್ಯಕ್ರಮದ ಮೂಲಕ ಶಾಲೆಯ ಮೂಲಸೌಕರ್ಯ ವೃದ್ಧಿ ಆಗಿ, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಲಭಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.
