ಮೋದಿ ಟೀಕಿಸಿದ ಕಾರ್ಕಳದ ಯುವ ಬಿಜೆಪಿ ಮುಖಂಡ ಬಂಧನ: ಸುಬ್ರಮಣಿಯನ್‌ ಸ್ವಾಮಿ ಖಂಡನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನೀತಿಗಳನ್ನು ತೀವ್ರವಾಗಿ ಟೀಕಿಸಿ ವಿವಾದ ಸೃಷ್ಟಿಸಿದ್ದ ಆರೋಪದಲ್ಲಿ ಗುಜರಾತ್‌ನ ಪೊಲೀಸ್ ತಂಡವೊಂದು ಬೆಂಗಳೂರಿನಲ್ಲಿ ಕಾರ್ಕಳ ಮೂಲದ ಬಿಜೆಪಿ ಯುವ ಮುಖಂಡನೋರ್ವನನ್ನು ಬಂಧಿಸಿದೆ. ಇದು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ಗುಜರಾತ್‌ ಪೊಲೀಸರ ನಡೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಯುವ ಮುಖಂಡ ಗುರುದತ್ ಶೆಟ್ಟಿ ಕಾರ್ಕಳ ಬಂಧಿತ ಆರೋಪಿ. ಪ್ರಧಾನಿ ಮೋದಿಯವರ ಕೆಲವು ನೀತಿ-ನಿಯಮಗಳನ್ನು ಕಟುವಾಗಿ ಟೀಕಿಸಿದ್ದ ಕಾರಣಕ್ಕೆ ಗುಜರಾತ್‌ನ ಪೊಲೀಸ್ ತಂಡವೊಂದು ನ.11ರಂದು ಬೆಂಗಳೂರಿಗೆ ಆಗಮಿಸಿ ಗುರುದತ್ ಶೆಟ್ಟಿ ಕಾರ್ಕಳ ಎಂಬವರನ್ನು ಬಂಧಿಸಿದ್ದಾಗಿ ವರದಿಯಾಗಿದೆ.

ಸುಬ್ರಮಣಿಯನ್‌ ಸ್ವಾಮಿ ಎಕ್ಸ್‌ ಮಾಡಿ ಖಂಡನೆ

ಗುರುದತ್‌ ಶೆಟ್ಟಿ ಬಂಧನ ಖಂಡಿಸಿ ಸುಬ್ರಮಣಿಯನ್‌ ಸ್ವಾಮಿ ʻX ́ ಮಾಡಿದ್ದು, “ಗುಜರಾತ್ ರಾಜ್ಯ ಪೊಲೀಸ್ ತಂಡ ಇಂದು ಬೆಂಗಳೂರಿಗೆ ಹಾರಿ, ಬಿಜೆಪಿಯ ಯುವ ಸದಸ್ಯ ಗುರುದತ್ ಕಾರ್ಕಳ ಶೆಟ್ಟಿ ಅವರನ್ನು ಬಂಧಿಸಿದೆ. ಏಕೆಂದರೆ ಅವರು ಮೋದಿಯ ನೀತಿಗಳನ್ನು ಟೀಕಿಸಿದ್ದರು. ಪೊಲೀಸ್ ದೌರ್ಜನ್ಯದ ಬಗ್ಗೆ ಅನೇಕರು ನನಗೆ ದೂರು ನೀಡಿದ್ದಾರೆ. ಕೂಡಲೇ ಗುರುದತ್ ಅವರನ್ನು ಬಿಡುಗಡೆ ಮಾಡಬೇಕು. ವಕೀಲ ಸಮ್ಮುಖದಲ್ಲಿ ಹೇಳಿಕೆಯನ್ನು ನೀಡಲು ಅವಕಾಶ ಮಾಡಿಕೊಡಬೇಕು. ನ್ನ ವಕೀಲ ಸ್ನೇಹಿತರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಪರವಾಗಿ ನಿಲ್ಲುವಂತೆ ನಾನು ಕೇಳಿಕೊಂಡಿದ್ದೇನೆ. ನಮ್ಮ ಸ್ಥಳೀಯ ವಕೀಲರ ಉಪಸ್ಥಿತಿಯಲ್ಲಿ ಅವರನ್ನು ಪ್ರಶ್ನಿಸಬಹುದು” ಎಂದು ಹೇಳಿ ಖಂಡನೆ ವ್ಯಕ್ತಪಡಿಸಿದ್ದಾರೆ.

error: Content is protected !!