ಭಾರತದ ಗೋಡಂಬಿ ಉದ್ಯಮದ ನೂರು ವರ್ಷಗಳ ಸಂಭ್ರಮಕ್ಕೆ ಮಂಗಳೂರು ಸಜ್ಜು: ನ.14ರಿಂದ ʻಕಾಜು ಶತಮಾನೋತ್ಸವ ಸಮ್ಮೇಳನʼ

ಮಂಗಳೂರು : ಭಾರತದ ಸಂಘಟಿತ ಗೋಡಂಬಿ ಉದ್ಯಮದ ನೂರು ವರ್ಷಗಳ ಸಂಭ್ರಮಾರ್ಥವಾಗಿ, ಕರ್ನಾಟಕ ಗೋಡಂಬಿ ತಯಾರಕರ ಸಂಘ (ಕೆಸಿಎಂಎ) ವತಿಯಿಂದ “ಕಾಜು ಶತಮಾನೋತ್ಸವ ಸಮ್ಮೇಳ – 2025” ನವೆಂಬರ್ 14ರಿಂದ 16ರವರೆಗೆ ಮಂಗಳೂರಿನ ಡಾ. ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಎಸ್.ಎ. ರಾವ್ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಭಾರತೀಯ ಗೋಡಂಬಿ ಉದ್ಯಮದ ಜನ್ಮಸ್ಥಳವಾಗಿದ್ದು, ಈ ಶತಮಾನೋತ್ಸವ ಕಾರ್ಯಕ್ರಮವು ಉದ್ಯಮದ ಪಯಣವನ್ನು ಸ್ಮರಿಸುವ ಮಹತ್ವದ ಕ್ಷಣ ಎಂದು ಹೇಳಿದರು.

ಗೋಡಂಬಿ ಉದ್ಯಮದ ಪಯಣ:
1925ರಲ್ಲಿ ಬ್ರಿಟಿಷ್ ಕಂಪನಿ ಪಿಯರ್ಸ್ ಲೆಸ್ಲೀ ಇಂಡಿಯಾ ಲಿಮಿಟೆಡ್ ಮಂಗಳೂರಿನ ಜೆಪ್ಪುವಿನಲ್ಲಿ ಸ್ಥಾಪಿಸಿದ ಮೊದಲ ಕಾರ್ಖಾನೆ ʻಮೈದಾನ್ ಫ್ಯಾಕ್ಟರಿʼಯಿಂದ ಸಂಘಟಿತ ಗೋಡಂಬಿ ಸಂಸ್ಕರಣೆಯ ಪ್ರಾರಂಭವಾಯಿತು. ಆರಂಭಿಕ ದಿನಗಳಲ್ಲಿ ಚಹಾ ಪೆಟ್ಟಿಗೆಗಳಲ್ಲಿ ಗೋಡಂಬಿ ಕೊಚ್ಚಿನ್ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು.

1930ರಲ್ಲಿ ಕಾರ್ಬನ್ ಡೈಆಕ್ಸೈಡ್ ಇನ್ಫ್ಯೂಸ್ ಟಿನ್ ಕಂಟೇನರ್‌ಗಳ ಬಳಕೆಯೊಂದಿಗೆ ಪ್ಯಾಕೇಜಿಂಗ್‌ನಲ್ಲಿ ಕ್ರಾಂತಿ ಸಂಭವಿಸಿ ಮಂಗಳೂರು ಗೋಡಂಬಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿಯಲ್ಲಿತು. 1940ರ ವೇಳೆಗೆ ಐದು ಕಾರ್ಖಾನೆಗಳಷ್ಟಿದ್ದ ಈ ಉದ್ಯಮವು ಇಂದು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 250ಕ್ಕೂ ಹೆಚ್ಚು ಘಟಕಗಳಿಗೆ ವಿಸ್ತರಿಸಿದೆ. ಕರ್ನಾಟಕದ ಗೋಡಂಬಿ ಸಂಸ್ಕರಣಾ ಸಾಮರ್ಥ್ಯ 1970–80ರ ದಶಕದ 70,000 ಮೆಟ್ರಿಕ್ ಟನ್‌ನಿಂದ ಈಗ 5 ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ — ಇದು ಭಾರತದ ಒಟ್ಟು ಸಂಸ್ಕರಣೆಯ 25% ಆಗಿದೆ.

ನವಮಂಗಳೂರು ಬಂದರು ಪ್ರಾಧಿಕಾರದ ಪಾತ್ರ:
ಈ ಬೆಳವಣಿಗೆಯಲ್ಲಿ ನವಮಂಗಳೂರು ಬಂದರು ಪ್ರಾಧಿಕಾರ (NMPA) ಪ್ರಮುಖ ಪಾತ್ರವಹಿಸಿದ್ದು, ಗೋವಾ, ಮಹಾರಾಷ್ಟ್ರ, ಕೇರಳ, ಆಂಧ್ರ ಮತ್ತು ಕರ್ನಾಟಕಕ್ಕೆ ಗೋಡಂಬಿ ಪೂರೈಕೆ ಮಾಡುತ್ತಿದೆ. ಏಪ್ರಿಲ್–ಅಕ್ಟೋಬರ್ 2025ರ ಅವಧಿಯಲ್ಲಿ NMPA ಮೂಲಕ 3.45 ಲಕ್ಷ ಮೆಟ್ರಿಕ್ ಟನ್ ಗೋಡಂಬಿ ಆಮದು ಆಗಿದ್ದು, ಕಳೆದ ವರ್ಷದಿಗಿಂತ 44% ಹೆಚ್ಚಾಗಿದೆ. ಪೂರ್ವ ಆಫ್ರಿಕಾ ಋತುವು ಪ್ರಾರಂಭವಾಗಿರುವುದರಿಂದ ಈ ವರ್ಷ 5.2 ಲಕ್ಷ ಮೆಟ್ರಿಕ್ ಟನ್ ಆಮದು ನಿರೀಕ್ಷೆಯಿದೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭ:
ಶತಮಾನೋತ್ಸವ ಸಮ್ಮೇಳದ ಉದ್ಘಾಟನೆ ನವೆಂಬರ್ 14ರಂದು ನಡೆಯಲಿದ್ದು, ಕಾರ್ಮಿಕ, ಉದ್ಯೋಗ ಮತ್ತು ಎಂಎಸ್‌ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಶಾಸಕ ಡಿ. ವೇದವ್ಯಾಸ್ ಕಾಮತ್, ಎನ್‌ಎಂಪಿಎ ಅಧ್ಯಕ್ಷ ಡಾ. ವೆಂಕಟ್ ರಮಣ ಅಕ್ಕರಾಜು, ಅಂತರರಾಷ್ಟ್ರೀಯ ನಟ್ ಕೌನ್ಸಿಲ್ ಅಧ್ಯಕ್ಷ ಅಶೋಕ್ ಕ್ರಿಶನ್, ಮತ್ತು ಗೋಡಂಬಿ ತಜ್ಞ ರೆನೆ ಗೌಡ್ರಿಯನ್ ಉಪಸ್ಥಿತರಿರಲಿದ್ದಾರೆ.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಯಂತ್ರೋಪಕರಣಗಳ ಪ್ರದರ್ಶನ  
ಸಮ್ಮೇಳದ ಅಂಗವಾಗಿ 120ಕ್ಕೂ ಹೆಚ್ಚು ಮಳಿಗೆಗಳು ಗೋಡಂಬಿ ಸಂಸ್ಕರಣೆಯ ಹೊಸ ತಂತ್ರಜ್ಞಾನ, ಭಾರತ ಮತ್ತು ವಿಯೆಟ್ನಾಂನ ಯಂತ್ರೋಪಕರಣಗಳು ಹಾಗೂ ನವೀನ ಉತ್ಪನ್ನ ಶ್ರೇಣಿಗಳನ್ನು ಪ್ರದರ್ಶಿಸಲಿವೆ. ಮೂರು ದಿನಗಳ ಈ ಸಮ್ಮೇಳದಲ್ಲಿ ಉದ್ಯಮ ತಜ್ಞರು ಜಾಗತಿಕ ಮಾರುಕಟ್ಟೆ ಪ್ರವೃತ್ತಿಗಳು, ಇ–ವಾಣಿಜ್ಯ ಮಾರ್ಗದಲ್ಲಿ ಮಾರಾಟದ ಬೆಳವಣಿಗೆ, ದೇಶೀಯ ಬಳಕೆಯ ಹೆಚ್ಚಳ ಮತ್ತು 2030ರೊಳಗೆ 2.5 ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಕುರಿತು ಚರ್ಚೆ ನಡೆಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಜು ಶತಮಾನೋತ್ಸವ ಶೃಂಗಸಭೆ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್, ಕೆಸಿಎಂಎ ಉಪಾಧ್ಯಕ್ಷ ತುಕಾರಾಮ್ ಪ್ರಭು, ಕೆಸಿಎಂಎ ಖಜಾಂಚಿ ಗಣೇಶ್ ಕಾಮತ್ ಹಾಗೂ ಕಾರ್ಯದರ್ಶಿ ಅಮಿತ್ ಪೈ ಉಪಸ್ಥಿತರಿದ್ದರು.

error: Content is protected !!