ಸುಳ್ಯ: ಟ್ರಸ್ಟ್ ಹೆಸರಿನಲ್ಲಿ ಸ್ಕೀಂ ಮಾಡಿ ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಸುಳ್ಯದಲ್ಲಿ ನಡೆದಿದೆ.

ಶಿವಪ್ರಕಾಶ್ , ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಕೆ.ಎಸ್, ಭಾರತಿ, ಗೀತಾ ಗಣೇಶ್, ಎನ್.ಇ. ವೈ. ಕಮಲಾಕ್ಷ, ಕೆ. ನಾಗೇಶ ಪ್ರಕರಣದ ಆರೋಪಿಗಳು.

ಕಸಬಾ ಗ್ರಾಮದ ವಿವೇಕಾನಂದ ಸರ್ಕಲ್ ಬಳಿ ಅಂಬಡೆಡ್ಕ ಎಂಬಲ್ಲಿರುವ ಸಮೃದ್ಧಿ ಎಂಬ ಹೆಸರಿನ ಕಾಂಪ್ಲೆಕ್ಸ್ ನಲ್ಲಿ 2013ರಲ್ಲಿ ಶ್ರಿ ತತ್ವಮಸಿ ಚಾರಿಟೇಬಲ್ ಟ್ರಸ್ಟ್(ರಿ) ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ (ರಿ) ಎಂಬ ಹೆಸರಿನಲ್ಲಿ ಸಂಸ್ಥೆ ಪ್ರಾರಂಭಿಸಿ, ಸಂಸ್ಥೆಯ ಪರವಾಗಿ ಸುಳ್ಯ ಪೇಟೆಯ ಗಾಂಧಿನಗರ ಎಂಬಲ್ಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ತೆರೆದು, ಬೆನಿಫಿಟ್ ಸ್ಕೀಂ ಒಂದನ್ನು ಪ್ರಾರಂಭಿಸಿ ಏಜೆಂಟರುಗಳ ಮೂಲಕ ಸಾವಿರಾರು ಸಾರ್ವಜನಿಕರನ್ನು ಸ್ಕೀಂ ಗೆ ಸದಸ್ಯರನ್ನಾಗಿ ಸೇರಿಸಿಕೊಂಡು ಅವರಿಂದ ಕೊಟ್ಯಾಂತರ ಹಣವನ್ನು ಸಂಗ್ರಹಿಸಿದ್ದಾರೆ.
ಈ ಹಣದಲ್ಲಿ ಮೂರು ಕೋಟಿ ಎಂಟು ಲಕ್ಷದ ಅರವತ್ತೇರಡು ಸಾವಿರದ ಐನೂರು ಇದ್ದು, ಸ್ಕೀಂ ಸದಸ್ಯರುಗಳಿಗೆ ಹಣವನ್ನಾಗಲೀ ಯಾವುದೇ ವಸ್ತುವನ್ನಾಗಾಲಿ ನೀಡದೇ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.