ಮಂಗಳೂರು : ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿ, ಕೊಡುಗೈ ದಾನಿಯಾಗಿ ಗುರುತಿಸಿದ್ದ ಹಾಶೀಂ ಖಾನ್ ಅವರು ತನ್ನ ಹುಟ್ಟೂರು ಉತ್ತರ ಪ್ರದೇಶದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದೂರದ ಉತ್ತರ ಪ್ರದೇಶದಿಂದ ಉದ್ಯೋಗ ನಿಮಿತ್ತ ಸಣ್ಣ ವಯಸ್ಸಿನಲ್ಲೇ ಮಂಗಳೂರಿಗೆ ಬಂದಿದ್ದ ಅವರು, ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಅಷ್ಟೇ ಅಲ್ಲ ಬಡವರ ಕಷ್ಟ ಅರಿತು ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ತಾವೇ ಖುದ್ದಾಗಿ ಆಹಾರ ಸಾಮಾಗ್ರಿಗಳನ್ನು ನೀಡಿರುವುದನ್ನು ಜನ ಸ್ಮರಿಸಿಕೊಳ್ಳುತ್ತಿದ್ದಾರೆ.

ಹುಟ್ಟೂರು ಉತ್ತರ ಪ್ರದೇಶಕ್ಕೆ ಕಾರ್ಯಕ್ರಮವೊಂದರ ನಿಮಿತ್ತ ತೆರಳಿದ್ದ ಅವರು ಊರಿನಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.