ಬ್ಲೂಫಿಲಂ ನಿಷೇಧಿಸಿದ್ರೆ ನೇಪಾಳ ರೀತಿ ದಂಗೆ ಆದೀತು : ಸುಪ್ರೀಂ ಕೋರ್ಟ್

ನವದೆಹಲಿ: ಬ್ಲೂಫಿಲಂಗಳ ನಿಷೇಧ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಮನ್ನಣೆ ನೀಡಲು ಹಿಂದೇಟು ಹಾಕಿರುವ ಸುಪ್ರೀಂ ಕೋರ್ಟ್, ನೇಪಾಳದಲ್ಲಿ ಸೋಷಿಯಲ್‌ ಮೀಡಿಯಾ ನಿಷೇಧದ ವಿರುದ್ಧ ಉಂಟಾಗಿದ್ದ ಜೆನ್‌ಝೀ ದಂಗೆಯನ್ನು ಉದಾಹರಣೆಯಾಗಿ ನೀಡಿದೆ.‌

‘ನೇಪಾಳದಲ್ಲಿ ನಿಷೇಧ ಹೇರಲು ಯತ್ನಿಸಿದಾಗ ಏನಾಯಿತು ಎಂದು ಗೊತ್ತಿದೆಯಲ್ಲವೇ?’ ಎಂದು ಹೇಳಿದೆ. ಅಲ್ಲದೆ, ‘ಆನ್‌ಲೈನ್‌ ಕಂಟೆಂಟ್‌ ನಿಷೇಧವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟಿದೆ. ಆದಾಗ್ಯೂ ವಿಚಾರಣೆಯನ್ನು 4 ವಾರಗಳ ಕಾಲ ಮುಂದೂಡಿದೆ.

‘ಪೋರ್ನ್‌ ಚಿತ್ರಗಳ ವೀಕ್ಷಣೆಯಿಂದ ವ್ಯಕ್ತಿ, ವಿಶೇಷವಾಗಿ 13ರಿಂದ 18ರ ಹರೆಯದವರು ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿವೆ. ಅಂತಹ ದೃಶ್ಯಗಳು ಜನರಿಗೆ ಸುಲಭವಾಗಿ ಸಿಗುವುದನ್ನು ತಡೆಯಲು ಯಾವುದೇ ಕ್ರಮಗಳಿಲ್ಲ. ಅಶ್ಲೀಲ ಚಿತ್ರಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನೀತಿ ರೂಪಿಸಬೇಕು’ ಎಂದು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ಇದರ ವಿಚಾರಣೆ ನಡೆಸಿದ ಸಿಜೆಐ ನ್ಯಾ। ಬಿ.ಆರ್‌. ಗವಾಯಿ ಅವರ ಪೀಠ, ‘ಬ್ಯಾನ್‌ನಿಂದಾಗಿ ನೇಪಾಳದಲ್ಲಿ ಏನಾಯಿತು ನೋಡಿ’ ಎಂದು ಅಲ್ಲಿ ನಡೆದ ಜೆನ್‌ಝೀ ದಂಗೆಯನ್ನು ಉಲ್ಲೇಖಿಸಿದರು ಹಾಗೂ ‘ಆನ್‌ಲೈನ್‌ ಕಂಟೆಂಟ್‌ ನಿಯಂತ್ರಣವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ’ ಎಂದರು. ಆದಾಗ್ಯೂ ವಿಚಾರಣೆಯನ್ನು 4 ವಾರ ಮುಂದೂಡಿದರು.

ನೇಪಾಳ ಸರ್ಕಾರ 26 ಸಾಮಾಜಿಕ ಮಾಧ್ಯಮಗಳ ಮೇಲೆ ಹೇರಿದ್ದ ನಿಷೇಧವು ಅಲ್ಲಿನ ಯುವಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಜೆನ್‌ಝೀ ದಂಗೆ ಎಂದು ಕರೆಯಲಾಗಿತ್ತು. ಇದು ಅಲ್ಲಿನ ಪ್ರಧಾನಿಯ ಪದಚ್ಯುತಿಗೆ ಕಾರಣವಾಗಿತ್ತು.

ಅರ್ಜಿಯಲ್ಲೇನಿದೆ?:
ಕೋವಿಡ್‌ ನಂತರ 14ರಿಂದ 18 ವರ್ಷದೊಳಿನ ಮಕ್ಕಳು ಒಂದೇ ಒಂದು ಕ್ಲಿಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದಾರೆ. ಪ್ರತಿ ಸೆಕೆಂಡ್‌ಗೆ 5000 ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲಾಗುತ್ತಿದೆ. ಯುರೋಪ್‌, ಆಸ್ಟ್ರೇಲಿಯಾ, ಚೀನಾ, ಅರಬ್‌ ದೇಶಗಳಲ್ಲಿ ನಿಷೇಧವಿದೆ. ಆದರೆ ಭಾರತದಲ್ಲಿ ಮಾತ್ರ ನಿಷೇಧ ಹೇರಿಲ್ಲ ಎಂದು ಅರ್ಜಿದಾರರು ವಾದಿಸಿದರು.

error: Content is protected !!