ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಟಿಪಳ್ಳ ಎರಡನೆ ವಿಭಾಗ ಇಲ್ಲಿಗೆ ಬಿ.ಎ.ಎಸ್ ಎಪ್ ಬಾಳ ಸಂಸ್ಥೆಯ ವತಿಯಿಂದ ಸುಮಾರು 1 ಲಕ್ಷ 88 ಸಾವಿರ ವೆಚ್ಚದಲ್ಲಿ ಶುಧ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದು ಅದರ ಉದ್ಘಾಟನೆ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು.

ಬಿ.ಎ.ಎಸ್ ಎಪ್ ಸಂಸ್ಥೆಯ ಮಾನವ ವಿಭಾಗದ ಪ್ರಭಂದಕರಾದ ಸಂತೋಷ್ ಪೈ ಉದ್ಘಾಟಿಸಿದರು ವೇದಿಕೆಯಲ್ಲಿ ಮನಪಾ ಮಾಜಿ ಸದಸ್ಯರಾದ ಲೋಕೇಶ್ ಬೊಳ್ಳಾಜೆ,ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಸ್ಪಕ್,ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮಹಮ್ಮದ್ ಷರೀಪ್, ನೀರಿನ ಘಟಕದ ನಿಯಂತ್ರಣ ಮುಖ್ಯಸ್ಥರಾದ ಶಿವಕುಮಾರ್ , ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಅನಂತರಾಮ್ ಸ್ವಾಗತಿಸಿ ಸಹಶಿಕ್ಷಕಿ ದೀಪಾ ಕಾರ್ಯಕ್ರಮ ನಿರೂಪಿಸಿದರು.