ಬಸ್‌ ಪಲ್ಟಿ ಪ್ರಕರಣ: ಓರ್ವ ವ್ಯಕ್ತಿ ಸಾವು, 6 ಮಂದಿ ಗಂಭೀರ

ಸುಬ್ರಹ್ಮಣ್ಯ: ತಾಲೂಕಿನ ವನಗೂರಿನಿಂದ ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೊರಟಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಬಿಸಿಲೆ ಘಾಟ್ ಸಮೀಪ 20 ಅಡಿ ಎತ್ತರದಿಂದ ಮಗುಚಿ ಬಿದ್ದ ಘಟನೆ ಇಂದು(ಅ.30) ಬೆಳಿಗ್ಗೆ ನಡೆದಿದ್ದು, ಈ ಪರಿಣಾಮ ಓರ್ವ ಮೃತಪಟ್ಟಿದ್ದು, 6 ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಶಿವರಾಜ್ ( 50) ಮೃತಪಟ್ಟವರು.

ಮದುವೆ ವಾಹನ ಪಲ್ಟಿ: 20ಕ್ಕೂ ಅಧಿಕ ಮಂದಿಗೆ ಗಾಯ

ಈ ವಾಹನದಲ್ಲಿ ಒಟ್ಟು ಸುಮಾರು 30 ಮಂದಿಯಿದ್ದು, 20 ಮಂದಿ ಗಾಯಗೊಂಡಿದ್ದು, ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿತ್ತು. ಅವರಲ್ಲಿ ಶಿವರಾಜ್ ಎಂಬವರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿ ಭಾಗಿಯಾಗಬೇಕಾದವರು ಶೋಕದ ಮನೆಯಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

 

error: Content is protected !!