ಐಆರ್‌ಸಿಟಿಸಿ ವತಿಯಿಂದ ಕಾಶಿ, ಅಯೋಧ್ಯೆ, ಉತ್ತರ ಭಾರತ ಪ್ರವಾಸ ಪ್ಯಾಕೇಜುಗಳ ಪ್ರಕಟ

ಮಂಗಳೂರು: ಭಾರತೀಯ ರೈಲ್ವೇ ಕ್ಯಾಟರಿಂಗ್ ಅಂಡ್‌ ಟೂರಿಸಂ ಕಾರ್ಪೊರೇಶನ್‌ ಲಿಮಿಟೆಡ್‌ (IRCTC) – ಭಾರತ ಸರ್ಕಾರದ ನವರತ್ನ ಸಂಸ್ಥೆಯು ದಕ್ಷಿಣ ವಲಯದ ಮಂಗಳೂರು ಕಚೇರಿಯಿಂದ ಯಾತ್ರಿಕರ ಅನುಕೂಲಕ್ಕಾಗಿ ಹಲವು ವಿಶಿಷ್ಟ ಪ್ರವಾಸ ಪ್ಯಾಕೇಜುಗಳನ್ನು ಪ್ರಕಟಿಸಿದೆ.

ಈ ಬಗ್ಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಸಂಸ್ಥೆಯ ಜಂಟಿ ಜನರಲ್‌ ಮ್ಯಾನೇಜರ್‌ ಸ್ಯಾಮ್‌ ಜೋಸೆಫ್‌ ಪಿ. ಈ ಪ್ಯಾಕೇಜುಗಳಲ್ಲಿ ಕಾಶಿ, ಪ್ರಯಾಗರಾಜ್, ಅಯೋಧ್ಯಾ ವಿಮಾನ ಪ್ಯಾಕೇಜ್, ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್, ಮತ್ತು ದಕ್ಷಿಣ ಭಾರತ ದೇವಾಲಯ ಪ್ಯಾಕೇಜ್ ಸೇರಿದಂತೆ ತೀರ್ಥಯಾತ್ರೆ ಹಾಗೂ ಪ್ರವಾಸಿಗರಿಗೆ ಅನುಕೂಲಕರ ಯೋಜನೆಗಳು ಸೇರಿವೆ ಎಂದರು.

IRCTC ಪ್ರಕಟಣೆಯ ಪ್ರಕಾರ, ಕಾಶಿ/ಪ್ರಯಾಗರಾಜ್/ಅಯೋಧ್ಯಾ ವಿಮಾನ ಪ್ಯಾಕೇಜ್‌ — 5 ದಿನ/4 ರಾತ್ರಿ ಅವಧಿಯ ಪ್ರವಾಸವಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದೆ. ಪ್ರತಿ ಪ್ರಯಾಣಿಕನಿಗೂ ರೂ. 35,600/- ರಿಂದ ಶುಲ್ಕ ನಿಗದಿಯಾಗಿದೆ.

ಉತ್ತರ ಭಾರತ ರೈಲು ಟೂರ್ ಪ್ಯಾಕೇಜ್‌ — ವಾರಾಣಸಿ, ಗಯಾ, ಪ್ರಯಾಗರಾಜ್‌, ಅಯೋಧ್ಯಾ, ಹರ್ಷಿದ್ವಾರ, ಮಥುರಾ, ಆಗ್ರಾ ಮುಂತಾದ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ. AC ವರ್ಗದ ಪ್ರಯಾಣಿಕರಿಗೆ ರೂ. 11,430/-, ಸ್ಲೀಪರ್ ವರ್ಗದ ಪ್ರಯಾಣಿಕರಿಗೆ ರೂ. 10,160/- ರಿಂದ ಶುಲ್ಕ ನಿಗದಿಯಾಗಿದೆ.

ಈ ಎಲ್ಲಾ ಪ್ಯಾಕೇಜುಗಳಲ್ಲಿ ಪ್ರಯಾಣ, ವಸತಿ, ಆಹಾರ ಮತ್ತು ಸ್ಥಳೀಯ ಸಂಚಾರ ಸೌಲಭ್ಯಗಳನ್ನು ಒಳಗೊಂಡಿದೆ. ಯಾತ್ರಿಕರಿಗೆ ಸುರಕ್ಷಿತ ಹಾಗೂ ಆರ್ಥಿಕ ಪ್ರಯಾಣದ ಅನುಭವ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಪ್ಯಾಕೇಜುಗಳ ಕುರಿತು ಹೆಚ್ಚಿನ ಮಾಹಿತಿಗೆ ಅಥವಾ ಬುಕ್ಕಿಂಗ್‌ಗಾಗಿ IRCTC ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದು.
📞 ದೂರವಾಣಿ ಸಂಖ್ಯೆ: 0824-2001936 / 8287932043
📧 ಇಮೇಲ್: tiftcmaq@irctc.com
🌐 ವೆಬ್‌ಸೈಟ್: www.irctctourism.com

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

error: Content is protected !!