ಸ್ಕೂಟರ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾದ ಸವಾರ

ಮಂಗಳೂರು: ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ‌ ಹೃದಯಾಘಾತಕ್ಕೊಳಗಾಗಿ‌ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಇಂದು(ಅ.30) ಬೆಳಗ್ಗೆ ಸುರತ್ಕಲ್‌ ಜಂಕ್ಷನ್‌ನಲ್ಲಿ ಸಂಭವಿಸಿದೆ.

ಕಾಟಿಪಳ್ಳ ಮೋರ್ ಸೂಪರ್ ಮಾರ್ಕೆಟ್ ಬಳಿಯ ನಿವಾಸಿ ಜಬ್ಬಾರ್ ಹೃದಯಾಘಾತಕ್ಕೊಳಗಾದ ವ್ಯಕ್ತಿ.

ಜಬ್ಬಾರ್ ಅವರು ಸೂರಜ್ ಹೋಟೇಲ್ ಕಡೆಯಿಂದ ಸುರತ್ಕಲ್ ಜಂಕ್ಷನ್‌ ಕಡೆಗೆ ಸರ್ವಿಸ್ ರಸ್ತೆಯಾಗಿ ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಹೃದಯಾಘಾತ‌ ಸಂಭವಿಸಿ ವಾಹನದಿಂದ ರಸ್ತೆಗೆ ಬಿದ್ದರು ಎನ್ನಲಾಗಿದೆ.

ತಕ್ಷಣ ಸ್ಥಳೀಯರು ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲಾಗಲೇ ಅವರು ಹೃದಾಯಾಘಾತಕ್ಕೊಳಗಾಗಿ‌ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಈ‌ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!