ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ ಇದರ 2024-2025 ನೇ ಸಾಲಿನ ವಾರ್ಷಿಕ ಮಹಾಸಭೆಯು ಕದ್ರಿ ಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಇದರ ನೂತನ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕಿಶೋರ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಿಶೋರ್ ಡಿ. ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ ಮತ್ತು ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಣ್ ಕುಮಾರ್ ಮಲ್ಲೂರ್, ಕೋಶಾಧಿಕಾರಿಯಾಗಿ ಮೋಹನ ಕೊಪ್ಪಲ ಕದ್ರಿ, ಕ್ಷೇಮನಿಧಿ ಪ್ರಧಾನಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ರಾಘವೇಂದ್ರ ರಾವ್ ಶರವು, ಜೊತೆ ಕಾರ್ಯದರ್ಶಿ ತುಳಸೀ ದಾಸ್ ಉರ್ವ, ಸಲಹಾ ಸಮಿತಿ ಸದಸ್ಯರಾಗಿ ತಮ್ಮ ಲಕ್ಷ್ಮ್ಮಣ್ , ಶೋಭಾಶೆಟ್ಟಿ, ಶರತ್ ಶೆಟ್ಟಿ ಮುಂಡ್ಕೂರು, ಸಂಘಟನಾ ಕಾರ್ಯದರ್ಶಿಯಾಗಿ ಮಧು ಬಂಗೇರ, ಪ್ರಚಾರ ನಿರ್ದೇಶಕರಾಗಿ ರತ್ನದೇವ್ ಪುಂಜಾಲಕಟ್ಟೆ, ಆಡಳಿತ ಸಮಿತಿ ಸದಸ್ಯರಾಗಿ ಕಿಶೋರ್ ಕುಮಾರ್ ಜೋಗಿ ಉಬಾರ್, ಕಿಶೋರ್ ಡಿ.ಕೆ., ಸುಧಾಕರ ಶೆಟ್ಟಿ ಬೆದ್ರ, ಸಂಜೀವ ಅಡ್ಯಾರ್, ನಾಗೇಶ್ ದೇವಾಡಿಗ ಕದ್ರಿ, ಮೋಹನ್ ಕೆ. ಬೋಳಾರ್, ಅಶ್ವಿನಿ ರೈ, ಕಿಶನ್ ಮಂಗಳಾದೇವಿ, ಹರೀಶ್ ಕೆ. ಶಕ್ತಿನಗರ, ಮನೋಜ್ ಕುಮಾರ್, ನರೇಂದ್ರ ಎಸ್. ಅಂಚನ್, ಸುರೇಶ್ ಬಲ್ಮಠ, ಉದಯರವಿ ಶೆಟ್ಟಿ, ರಾಜಶೇಖರ ಶೆಟ್ಟಿ, ನಿತಿನ್ ಕುಮಾರ್ ಕನೀರ್ತೋಟ, ವಿನಾಯಕ ಜೆಪ್ಪು, ದಿನೇಶ್ ಕುಂಪಲ, ನರೇಂದ್ರ ಕೆರೆಕಾಡು, ತಾರಾನಾಥ್ ಉರ್ವ, ರಂಜನ್ ಬೋಳೂರು ಆಯ್ಕೆಯಾದರು.
ಮೋಹನ ಕೊಪ್ಪಲ ಕದ್ರಿ ಕಾರ್ಯಕ್ರಮ ನಿರ್ವಹಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು.ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ಸ್ವಾಗತಿಸಿ, ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು.