ಸುಳ್ಯ: ಹಿರಿಯ ಯಕ್ಷಗಾನ ಕಲಾವಿದ ಮತ್ತು ರಂಗಕರ್ಮಿ ಸುಜನಾ ಸುಳ್ಯ (ಎಸ್.ಎನ್. ಜಯರಾಮ್)(89) ಇಂದು(ಅ.24) ಬೆಳಿಗ್ಗೆ 5.50 ಕ್ಕೆ ವಯೋಸಹಜ ನಿಶ್ಶಕ್ತಿಯಿಂದ ವಿಧಿವಶರಾದರು. ಅವರು ಎರಡು ದಿನಗಳಿಂದ ಆರೋಗ್ಯ ಹದಗೆಟ್ಟು ಸುಳ್ಯದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಸುಜನಾ ಸುಳ್ಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಯರಾಮ ನಾವೂರು ಅವರು ಯಕ್ಷಗಾನದಲ್ಲಿ ಬಹುಮುಖ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯಗಾರರಾಗಿದ್ದ ಅವರು ಸುಳ್ಯ ತಾಲೂಕಿನ “ರಂಗಮನೆ” ಎಂಬ ಕಲಾ ಕೇಂದ್ರದ ರೂವಾರಿ ಮತ್ತು ನಿರ್ದೇಶಕ ಜೀವನ್‌ರಾಮ್ ಸುಳ್ಯ ಅವರ ತಂದೆ. ರಂಗಮನೆಯ ಯಕ್ಷಗಾನ ಮತ್ತು ರಂಗಭೂಮಿ ಸೇರಿದಂತೆ ವಿವಿಧ ಸಾಂಸ್ಕ ತಿಕ ಚಟುವಟಿಕೆಗಳಲ್ಲಿಯೂ ಸುಜನಾ ತೊಡಗಿಸಿಕೊಂಡಿದ್ದರು.
