ಸುಳ್ಯ: ಅರಂತೋಡಿನಲ್ಲಿ ಎರಡು ಸ್ಕೂಟಿಗಳ ನಡುವೆ ಇಂದು(ಅ.24) ಅಪಘಾತವಾಗಿ ಸ್ಕೂಟಿಗಳು ಜಖಂಗೊಂಡಿರುವುದು ವರದಿಯಾಗಿದೆ.

ಕಾಸರಗೋಡು ಮೂಲದ ಕಬೀರ್ ಎಂಬವರು ಮಡಿಕೇರಿಯಿಂದ ಕಾಸಗೋಡಿಗೆ ತೆರಳುತ್ತಿದ್ದಾಗ ತೊಡಿಕಾನ ಕಡೆಯಿಂದ ಬರುತ್ತಿದ್ದ ಅಡ್ಯಡ್ಕ ಸಿ.ಆರ್.ಸಿ ಕಾಲೋನಿ ನಿವಾಸಿ ಗುಣಶೀಲ ಅವರ ಸಹೋದರ ದೊರೈಸ್ವಾಮಿ .ಪಿ ಅವರ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ.

ಸ್ಕೂಟಿ ಸವಾರರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದು ಬಂದಿದೆ.