ಮಂಗಳೂರು: ಥಿಯೇಟರ್‌ನಲ್ಲಿ ಬರೋಬ್ಬರಿ 160 ದಿನಗಳ ಕಾಲ ಆರ್ಭಟಸಿದ್ದ ತುಳು ಚಿತ್ರ ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಅ.25ರಿಂದ ಯೂಟ್ಯೂಬ್ ನಲ್ಲಿ ಉಚಿತವಾಗಿ ವೀಕ್ಷಕರಿಗೆ ದೊರೆಯುವ ಮೂಲಕ ತುಳು ಚಿತ್ರಪ್ರೇಮಿಗಳಿಗೆ ಮನರಂಜಿಸಲು ಸಜ್ಜಾಗಿದೆ ಎಂದು ಚಿತ್ರ ತಂಡ ಘೋಷಿಸಿದೆ.
ಈ ಕುರಿತಂತೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ಆನಂದ್ ಎನ್. ಕುಂಪಲ, ನಿರ್ದೇಶಕ ರಾಹುಲ್ ಅಮೀನ್, ನಾಯಕ ನಟ ವಿನಿತ್ ಕುಮಾರ್ ಮತ್ತು ನಾಯಕ ನಟಿ ಸಮತಾ ಅಮೀನ್ 2025ರ ಜನವರಿ 31ರಂದು ತುಳುನಾಡಿನಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾದ ಈ ಚಿತ್ರವು ಚಿತ್ರಮಂದಿರಗಳಲ್ಲಿ 160 ದಿನಕ್ಕೂ ಹೆಚ್ಚು ಪ್ರದರ್ಶನಗೊಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಡಿಜಿಟಲ್ ಮೂಲಕ ವೀಕ್ಷಕರು ಉಚಿತವಾಗಿ ಚಿತ್ರ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ನೀಡಿದರು.
ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಜೊತೆಗೆ ಎಚ್.ಪಿ.ಆರ್ ಫಿಲಂಸ್(ಹರಿಪುಸಾದ್ ರೈ) ಸಹಯೋಗದಲ್ಲಿ ಮಿಡ್ಲ್ ಕ್ಲಾಸ್ ಫ್ಯಾಮಿಲಿ ನಿರ್ಮಿಸಲಾಗಿದೆ. ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರವಿರಾಮ ಕುಂಜ, ಕದ್ರಿ ನವನೀತ್ ಶೆಟ್ಟಿ, ಸಾಹಿಲ್ ರೈ, ಮೈಮ್ ರಾಮ್ ದಾಸ್, ರೂಪಾ ವರ್ಕಾಡಿ, ಚೈತ್ರ ಶೆಟ್ಟಿ, ಗಿರೀಶ್ ನಾರಾಯಣ್ ಮತ್ತು ಡೊನಿ ಆಶಾ ಕೊರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದೇ ತಂಡ ಈ ಹಿಂದೆ ‘ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಎಂಬ ಯಶಸ್ವಿ ಚಿತ್ರ ನೀಡಿದ್ದು, ಅದು ಕೂಡ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಛಾಯಾಗ್ರಹಣ – ವಿಷ್ಣು ಪ್ರಸಾದ್, ಸಂಗೀತ – ಸೃಜನ್ ಕುಮಾರ್ ತೋನ್ಸೆ, ವಸ್ತ್ರಾಲಂಕಾರ – ವರ್ಷ ಆಚಾರ್ಯ, ನೃತ್ಯ ಸಂಯೋಜನೆ – ನವೀನ್ ಶೆಟ್ಟಿ ಮತ್ತು ವಿನಾಯಕ್ ಆಚಾರ್ಯ ,ಸಂಕಲನ – ವಿಶಾಲ್ ದೇವಾಡಿಗ ಮಾಡಿದ್ದಾರೆ ಎಂದು ಚಿತ್ರ ತಂಡ ಮಾಹಿತಿ ನೀಡಿತು.
ಈ ಚಿತ್ರವನ್ನು ಎಲ್ಲರೂ ಉಚಿತವಾಗಿ, ಸುಲಭವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಬೇರೆ ಬೇರೆ ಡಿಜಿಟಲ್ ಫ್ಲಾರ್ಟ್ ಫಾರ್ಮ್‌ನಲ್ಲಿ ರಿಲೀಸ್‌ಗೆ ಮಾಡದೆ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಲು ಮುಂದಾಗಿದ್ದೇವೆ. ಯಾವಾಗ ಬೇಕಾದರೂ ಮನೆಮಂದಿ ತನ್ನ ಫ್ರೀ ಟೈಂನಲ್ಲಿ ವೀಕ್ಷಿಸಲು ವಿಶ್ವದಾದ್ಯಂತ ಇರುವ ತುಳು ಪ್ರೇಕ್ಷಕರ ಕೋರಿಕೆಗೆ ಸ್ಪಂದಿಸಿ, ಚಿತ್ರತಂಡವು ಈ ಚಿತ್ರವನ್ನು ಅಕ್ಟೋಬರ್ 25 ಶನಿವಾರದಿಂದ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ ‘Vaibhav Flix’ ಮೂಲಕ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.