ಕಾಸರಗೋಡು: ಕೋಣವೊಂದು ಕಟುಕಟನ ಮಚ್ಚಿನೇಟು ತಿಂದು ಮಿಂಚಿನಂತೆ ಪರಾರಿಯಾದ ಘಟನೆ ಕಾಸರಗೋಡಿನ ಮೊಗ್ರಾಲ್‌ಪುತ್ತೂರಿನಲ್ಲಿ ನಡೆದಿದೆ. ನೋವಿನ ಸಿಟ್ಟಟಿನಲ್ಲಿದದ್ದ ಕೋಣ ಬಾಲಕನೋರ್ವನನ್ನು ಗಾಯಗೊಳಿಸಿದೆ. ಕೋಣವನ್ನು ಎರಡು ದಿನಗಳ ಕಾಲ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ಹುಡುಕಾಟ ನಡೆಸಿದ್ದಾರೆ.
ಕಳೆದ ಭಾನುವಾರ ಕಸಾಯಿಖಾನೆಗೆ ತಂದಿದ್ದ ಕೋಣವನ್ನು ವಧಿಸಲು ಮಚ್ಚಿನಿಂದ ಹೊಡೆಯತ್ತಿದ್ದಂತೆ ಕೋಣ ನೋವಿನಿಂದ ಪರಾರಿಯಾಗಿರಬಹುದೆಂದು ಸ್ಥಳೀಯರು ಶಂಕಿಸಿದ್ದಾರೆ. ಏಟು ಬೀಳುತ್ತಿದ್ದಂತೆ ಕೋಣ ದಿಕ್ಕಾಪಾಲಾಗಿ ಓಡಿದ್ದು, ಕಾವುಗೋಳಿ ಕಡಪ್ಪುರ ನಿವಾಸಿ ರಾಜೇಶ್ ಎಂಬುವರ ಪುತ್ರ, ಆರನೇ ತರಗತಿ ವಿದ್ಯಾರ್ಥಿ ಅದ್ವೈತ್ ಸಿಲುಕಿದ್ದಾನೆ.
ಬಾಲಕನನ್ನು ತಿವಿದು ಗಾಯಗೊಳಿಸಿ ಸಮುದ್ರಕ್ಕೆ ಎಸೆದಿತ್ತು. ಅಲ್ಲದೆ ಕೋಣ ಮನೆಯೊಂದಕ್ಕೆ ಹಾನಿಯನ್ನೂ ಮಾಡಿದೆ. ಗಾಯಗೊಂಡಿದ್ದ ಅದ್ವೈತ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾನೆ.
ಎರಡು ದಿನಗಳ ಹುಚ್ಚೆದ್ದ ಕೋಣನಿಗಾಗಿ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಸ್ಥಳೀಯ ನಿವಾಸಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದರು. ನಿರಂತರ ಕಾರ್ಯಾಚರಣೆಯ ಬಳಿಕ ಕೋಣವನ್ನು ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.