ಮಂಗಳೂರು: ದಸರಾ ಗೌರವ ಸಮ್ಮಾನ್ 2025 ಪ್ರಶಸ್ತಿ ಸ್ವೀಕರಿಸಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಆಗಮಿಸಿದ ಹಿಂದುಳಿದ ವರ್ಗಗಳ ನಾಯಕ ಮೊಗವೀರ ರತ್ನ ನಾಡೋಜ ಡಾ. ಜಿ. ಶಂಕರ್ ರವರು ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ವಂದಿಸಿ ಕ್ಷೇತ್ರದ ದೇವರ ದರ್ಶನ ಮಾಡಿದರು. ಬಿಲ್ಲವರು ಮತ್ತು ಮೊಗವೀರ ಸಮಾಜ ರಾಜಕೀಯ ರಹಿತವಾಗಿ ಒಂದಾಗಬೇಕು.
ಬಿಲ್ಲವ ಸಮಾಜ ಮತ್ತು ಮೊಗವೀರ ಸಮಾಜದ ನಡುವೆ ರಾಜಕೀಯ ಪ್ರಜ್ಞೆಯ ಕೊರತೆಯಿಂದ ಬಿಲ್ಲವ ಸಮಾಜದ ಅಭ್ಯರ್ಥಿಗಳು ಚುನಾವಣೆ ನಿಂತಾಗ ಮೊಗವೀರ ಸಮಾಜ ಸ್ಪಂದಿಸಲಿಲ್ಲ ಅದೇ ರೀತಿ ಮೊಗವೀರ ಸಮಾಜ ಚುನಾವಣೆಗೆ ನಿಂತಾಗ ಬಿಲ್ಲವ ಸಮಾಜ ಸ್ಪಂದಿಸಲಿಲ್ಲ, ಇದರಿಂದಾಗಿ ಬಿಲ್ಲವ ಸಮಾಜಕ್ಕೆ ಮತ್ತು ಮೊಗವೀರ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಇಲ್ಲದೆ ಸಮಾಜದ ಅಭಿವೃದ್ಧಿಗೆ ತೊಂದರೆ ಆಗುತ್ತದೆ. ಮಂಗಳೂರು ಲೋಕಸಭಾ ಅಭ್ಯರ್ಥಿ ಉದಯೋನ್ಮುಖ ಪದ್ಮರಾಜ್ ಆರ್ ಪೂಜಾರಿ ಗೆಲ್ಲಬೇಕಿತ್ತು ಬಿಲ್ಲವ ಸಮಾಜಕ್ಕೆ ಆದ ನಷ್ಟ. ಮುಂದಿನ ದಿನಗಳಲ್ಲಿ ಬಿಲ್ಲವ ಮತ್ತು ಮೊಗವೀರ ಸಮಾಜದ ವ್ಯಕ್ತಿಗಳು ಯಾವುದೇ ಪಕ್ಷದಲ್ಲಿ ನಿಂತರೂ ನಾವು ಪಕ್ಷ ಭೇಧ ಮರೆತು ಒಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಜಯರಾಜ್ ಸೋಮ ಸುಂದರಂ, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ಟ್ರಸ್ಟಿಗಳಾದ ಕಿಶೋರ್ ದಂಡಕೇರಿ, ಕೃತಿನ್ ಅಮೀನ್, ಅಭಿವೃದ್ಧಿ ಸಮಿತಿ ಸದಸ್ಯರಾದ ಮೆಸ್ಕಾಂ ಚೆಯರ್ ಮ್ಯಾನ್ ಹರೀಶ್ ಕುಮಾರ್, ಚಂದನ್ ದಾಸ್, ಲೀಲಾಕ್ಷ ಕರ್ಕೇರ, ರಮಾನಾಥ ಕಾರಂದೂರು,ರಾಧಾಕೃಷ್ಣ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಅಧ್ಯಕ್ಷರಾದ ಜಯಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
