ಹನಿ ಟ್ರ್ಯಾಪ್ ಲೇಡಿ ನಿರೀಕ್ಷಾ ಆರೆಸ್ಟ್! ನ್ಯಾಯದ ನಿರೀಕ್ಷೆಯಲ್ಲಿ ಅಭಿಷೇಕ್ ಹೆತ್ತವರು!!

ಮಂಗಳೂರು: ತನ್ನ ರೂಮ್ ಮೇಟ್ ಗೆಳತಿಯರದ್ದೇ ಬಟ್ಟೆ ಬದಲಿಸುವ ನಗ್ನ ವಿಡಿಯೋ ಸೆರೆಹಿಡಿದು ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಠಾಣಾ ಪೊಲೀಸರು ಆರೋಪಿ ನಿರೀಕ್ಷಳನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಲೇಡಿಗೋಷನ್ ಆಸ್ಪತ್ರೆ ನರ್ಸ್ ಆಗಿದ್ದ ಕಳಸ ಮೂಲದ ನಿರೀಕ್ಷಾ ಕಾರ್ಕಳ ಮೂಲದ ತೀರಾ ಬಡ ಕುಟುಂಬಕ್ಕೆ ಸೇರಿದ ಅಭಿಷೇಕ್ ಆಚಾರ್ಯನನ್ನು ಪ್ರೀತಿಸುವ ನೆಪದಲ್ಲಿ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ದೋಚಿದ್ದಳು. ನಿರೀಕ್ಷಾ ಕಿರುಕುಳ ತಾಳಲಾರದೆ ಅಭಿಷೇಕ್ ಬೆಳ್ಮಣ್ಣ್ ಸೂರ್ಯ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
7 ಪುಟಗಳ ಡೆತ್ ನೋಟ್ ನಲ್ಲಿ ಅಭಿಷೇಕ್ ನಿರೀಕ್ಷಾ ಮತ್ತಾಕೆಯ ಗ್ಯಾಂಗ್ ಮಾಡಿದ್ದ ಕಿರುಕುಳವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ. ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಿಲ್ಲ ಎಂದು ಅಭಿಷೇಕ್ ಹೆತ್ತವರು ಸ್ನೇಹಿತರು ಆರೋಪಿಸಿದ್ದರು. ಈ ವೇಳೆ ನಿರೀಕ್ಷಾ ತನ್ನದೇ ಸ್ನೇಹಿತೆಯರ ನಗ್ನ ವಿಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿದ್ದು ಬೆಳಕಿಗೆ ಬಂದು ಯುವತಿಯರ ಪೋಷಕರು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು.
ಆರೋಪಿ ನಿರೀಕ್ಷ ಪೊಲೀಸ್ ವಶವಾಗಿದ್ದು ಆಕೆಯ ಗ್ಯಾಂಗ್ ಸದಸ್ಯರ ಬಂಧನವಾಗಬೇಕು ಎಂದು ಅಭಿಷೇಕ್ ಪೋಷಕರು, ನೆಟ್ಟಿಗರು ಒತ್ತಾಯಿಸಿದ್ದಾರೆ.

error: Content is protected !!