ಹಳೆಯಂಗಡಿ: ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ಕಿಶೋರ – ಕಿಶೋರಿ ಸಂಘದ ವತಿಯಿಂದ ಗೂಡು ದೀಪ ಮತ್ತು ರಂಗೋಲಿ ಸ್ಪರ್ಧೆ

ಮಂಗಳೂರು : ದೀಪಾವಳಿ ಹಬ್ಬದ ಅಂಗವಾಗಿ ಹಳೆಯಂಗಡಿಯ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ , ಶ್ರೀ ವಿದ್ಯಾ ವಿನಾಯಕ ರಜತಾ ಸೇವಾ ಟ್ರಸ್ಟ್ (ರಿ) ಹಳೆಯಂಗಡಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಯುವತಿ ಮಂಡಲ (ರಿ) ಹಳೆಯಂಗಡಿ, ದ.ಕ ಮತ್ತು ಕಿಶೋರ – ಕಿಶೋರಿ ಸಂಘ ಹಳೆಯಂಗಡಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೂಡು ದೀಪ ಮತ್ತು ರಂಗೋಲಿ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.


ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲದ ವಠಾರದಲ್ಲಿ ಭಾನುವಾರ (ಅ.19) ನಡೆದ ಈ ಸ್ಪರ್ಧೆಗಳಲ್ಲಿ ಸ್ಥಳೀಯ ಯುವಜನತೆ ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಸಂಯುಕ್ತ ಸಂಸ್ಥೆಯ ಹಲವಾರು ಸದಸ್ಯರು ಮತ್ತು ಮಕ್ಕಳ ಪೋಷಕರು ಈ ಸಮಾರಂಭದಲ್ಲಿ ಭಾರಿ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮಕ್ಕೆ ಉತ್ಸಾಹವನ್ನು ಹೆಚ್ಚಿಸಿದ್ದರು.

✅Business Offer✅: TUZHAR ಸುಗಂಧ ದ್ರವ್ಯದೊಂದಿಗೆ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. 💰ಕಡಿಮೆ ಹೂಡಿಕೆ, 📦ಕಚ್ಛಾವಸ್ತು ಪೂರೈಕೆ, 📈 ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಜೊತೆ ನಿಮ್ಮ ಸ್ವಂತ ವ್ಯವಹಾರ ಪ್ರಾರಂಭಿಸಿ. 📲 +918088947906 🌐 www.tuzharperfumes.com

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಕಿರಣ್ ರಾಜ್ ,ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಯತೀಶ್ ಕೋಟ್ಯಾನ್, ನಾಗೇಶ್ ಟಿ ಜಿ, ಸುಧಾಕರ್ ಆರ್ ಅಮೀನ್, ನಟರಾಜ್ , ತಾರಾನಾಥ್ . ಯುವತಿ ಮಂಡಲದ ಅಧ್ಯಕ್ಷರಾದ ಕುಮಾರಿ ನಿರ್ಮಿತಾ ಉಪಸ್ಥಿತರಿದ್ದರು.

✨ ಬನ್ನಿ, SilverRoute Journeys ಜೊತೆ ಕನಸಿನ ಪ್ರಯಾಣ ಆರಂಭಿಸಿ! ✨ ✈️ ವಿಮಾನ | 🚆 ರೈಲು & ಬಸ್ | 🏨 ಹೋಟೆಲ್ | 🌴 ರಜಾ ಪ್ಯಾಕೇಜ್‌ಗಳು 📞 +918197945822

ಯುವತಿ ಮಂಡಲದ ಕಾರ್ಯದರ್ಶಿ ಕುಮಾರಿ ಯಶಸ್ವಿ ಗಣ್ಯರನ್ನು ಸ್ವಾಗತಿಸಿದರು. ಕುಮಾರಿ ದಿವ್ಯಶ್ರೀ ರಮೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ಕೋಶಾಧಿಕಾರಿ ಕುಮಾರಿ ನಿಶಾ ವಂದಿಸಿದರು.

error: Content is protected !!