ಪ್ರಿಯಾಂಕ್‌ ಯಾರಿಂದಲೋ ಫೋನ್‌ ಮಾಡಿಸಿ ಬೆದರಿಕೆ ಹಾಕಿಸಿ, ಅದನ್ನು ಆರೆಸ್ಸೆಸ್‌ ಮೇಲೆ ಹೊರಿಸಿದ್ದಾರೆ: ವೇದವ್ಯಾಸ ಕಾಮತ್‌

ಮಂಗಳೂರು: ಪ್ರಿಯಾಂಕ್‌ ಅವರ ಮಾನಸಿಕತೆ ಹೇಗಿದೆ ಅಂದ್ರೆ ಅವರೇ ಯಾರೋ ಒಬ್ಬ ವ್ಯಕ್ತಿಯತ್ರ ಫೋನ್‌ ಮಾಡಿಸಿ, ಆ ವ್ಯಕ್ತಿಯಿಂದಲೇ ಬೆದರಿಕೆ ಹಾಕಿಸಿ ಅದನ್ನು ಮಾಧ್ಯಮಕ್ಕೆ ತೋರಿಸಿ ಆ ಮೂಲಕ ಆರೆಸ್ಸೆಸ್‌ ಅವಹೇಳನ ಮಾಡಿಸಬೇಕು, ಜನರು ಆರೆಸ್ಸೆಸ್‌ ವಿರುದ್ಧವಾಗಿ ಎದ್ದು ನಿಲ್ಲಬೇಕು ಎಂಬ ಮಾನಸಿಕತೆಯನ್ನು ಹೊಂದಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಆರೆಸ್ಸೆಸ್‌ ಎಂದರೆ ದೇಶಭಕ್ತಿ, ನಮ್ಮ ಸಂಸ್ಕೃತಿಯನ್ನು ಪ್ರೀತಿಸುವ ಒಂದು ಸಂಸ್ಥೆಯಾಗಿದ್ದು, ಸಂಸ್ಕಾರ ಕೊಡುವ ಒಂದು ಕೇಂದ್ರ. ಇಂತಹ ಆರೆಸ್ಸೆಸ್‌ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅದು ಪ್ರಿಯಾಂಕ್‌ ಖರ್ಗೆ ಇರ್ಬಹುದು. ಅಥವಾ ಇನ್ನಿತರ ನಾಯಕರುಗಳೇ ಇರಬಹುದು. ಅವರಾಡುವ ಮಾತುಗಳನ್ನು ಕಂಡಾಗ ಅವರು ಗಾಢ ನಿದ್ದೆಯಲ್ಲಿದ್ದಾರೆ ಎಂದೆನಿಸುತ್ತಿದೆ ಎಂದು ಆರೋಪಿಸಿದರು.

ಇವತ್ತು ಈ ದೇಶದ ಪ್ರಧಾನಿಯಿಂದ ಹಿಡಿದು ಪಂಚಾಯತ್‌ ಅಧ್ಯಕ್ಷರವರೆಗೆ ಆರೆಸ್ಸೆಸ್‌ ಸ್ವಯಂಸೇವಕರು ಆ ಪೀಠವನ್ನು ಅಲಂಕರಿಸುವುದನ್ನು ಕಂಡಿದ್ದೇವೆ. 1962ರಲ್ಲಿ ಚೀನಾ ಯುದ್ಧದ ಸಂದರ್ಭದಲ್ಲಿ ಆರೆಸ್ಸೆಸ್‌ನ ಕೊಡುಗೆಗಳನ್ನು ಮೆಚ್ಚಿ ಆರೆಸ್ಸೆಸ್‌ಗೆ ಪರೇಡ್‌ನಲ್ಲಿ ಭಾಗವಹಿಸಲು ಅಂದಿನ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಎರಡನೇ ಸರಂಘಚಾಲಕರಾದ ಗುರೂಜಿಯವರು ದೇವರ ಪಾದ ಸೇರ್ಕೊಂಡಾಗ ಲೋಕಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. ಎಲ್ಲಾ ಪಕ್ಷದವರು ಆರೆಸ್ಸೆಸ್‌ ದೇಶಭಕ್ತ ಸಂಘಟನೆ ಅಂತ ಹೇಳಿಕೊಂಡಿದ್ದಾರೆ. ಆದರೆ ಖರ್ಗೆ ಅಲ್ಲಸಲ್ಲದ ಮಾತುಗಳನ್ನಾಡಿ ಆರೆಸ್ಸೆಸ್‌ನವರು ತಾಲಿಬಾನಿಗಳು ಎಂದೆಲ್ಲಾ ಇಲ್ಲಸಲ್ಲದ ಮಾತುಗಳನ್ನಾಡಿ ಇವತ್ತು ಅಂಬೇಡ್ಕರ್‌ ಭಾವಚಿತ್ರ ಇಟ್ಟುಕೊಂಡು ನಾವು ಸಂವಿಧಾನ ವಿರೋಧಿ ಅಂತ ತೋರಿಸಿಕೊಳ್ಳುತ್ತಿದ್ದಾರೆ ಎಂದು ವೇದವ್ಯಾಸ್‌ ಹೇಳಿದರು.

ಪ್ರಿಯಾಂಕ್‌ ಖರ್ಗೆ ಅವರೇ ನಿಮಗೆ ಯಾರೋ ಒಬ್ಬ ವ್ಯಕ್ತಿ ನಿಮಗೆ ಫೋನ್‌ ಕರೆ ಮಾಡಿ ಬೆದರಿಕೆ ಹಾಕಿದ್ರೆ ತಮ್ಮ ಕೈಯ್ಯಲ್ಲೇ ಸರ್ಕಾರ ಇದೆ. ತಮ್ಮಲ್ಲೇ ಗೃಹ ಇಲಾಖೆಯೂ ಇದೆ. ತನಿಖೆ ಮಾಡಿಕೊಳ್ಳಿ. ಪತ್ರಿಕೆ, ಮಾಧ್ಯಮಗಳಲ್ಲಿ ತಮಗೆ ಆದಂತಹ ಅವಮಾನವನ್ನು ಮುಂದಿಟ್ಟು ಸಿಂಪಥಿಯನ್ನು ಪಡೆಯುವ ರೀತಿ ಇದೆಯಲ್ವಾ? ಇದು ನಿಮ್ಮ ಮಾನಸಿಕತೆಯನ್ನು ತೋರಿಸುತ್ತದೆ. ತಮ್ಮ ಸರ್ಕಾರ ಇರುವಾಗ ಮಾಧ್ಯಮದ ಎದುರುಗಡೆ ಅಸಹಾಯಕರಾಗಿ ಬೆದರಿಕೆ ಕರೆಯ ಆಡಿಯೋವನ್ನು ತೋರಿಸಿಕೊಳ್ಳುತ್ತಿದ್ದೀರಿ. ನಿಮ್ಮದೇ ಸರ್ಕಾರ ಇರುವಾಗ ನೀವು ಏನು ಕ್ರಮ ತಗೊಂಡ್ರಿ? ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಅವರ ಮಾನಸಿಕತೆ ಹೇಗಿದೆ ಅಂದ್ರೆ ಅವರೇ ಯಾರೋ ಒಬ್ಬ ವ್ಯಕ್ತಿಯತ್ರ ಫೋನ್‌ ಮಾಡಿಸಿ ಆ ವ್ಯಕ್ತಿಯಿಂದಲೇ ಬೆದರಿಕೆ ಹಾಕಿಸಿ ಅದನ್ನು ಮಾಧ್ಯಮಕ್ಕೆ ತೋರಿಸಿ ಆ ಮೂಲಕ ಆರೆಸ್ಸೆಸ್‌ ಅವಹೇಳನ ಮಾಡಿಸಬೇಕು, ಜನರು ಆರೆಸ್ಸೆಸ್‌ ವಿರುದ್ಧವಾಗಿ ಎದ್ದು ನಿಲ್ಲಬೇಕು ಎಂಬ ಮಾನಸಿಕತೆಯನ್ನು ಹೊಂದಿದ್ದೀರಿ. ನಿಮ್ಮ ಅಪ್ಪ ಇರ್ಬಹುದು ನಿಮ್ಮ ಇಡೀ ಕುಟುಂಬದ ವ್ಯಕ್ತಿಗಳಿರಬಹುದು ಅಥವಾ ಇಂದಿರಾ ಗಾಂಧಿ, ನೆಹರೂ, ರಾಜೀವ್‌ ಗಾಂಧಿ, ಎಂತೆಂಥ ವ್ಯಕ್ತಿಗಳು ಆರೆಸ್ಸೆಸ್‌ಗೆ ಬಹಿಷ್ಕಾರ ಹಾಕ್ಬೇಕು ಅಂತ ಹೋದಾಗ ಆರೆಸ್ಸೆಸ್‌ ಸತ್ಯ ಹೊರಬಂದಾಗ ತಪ್ಪಾಯ್ತು ಎಂದು ಪುನರಪಿ ಆರೆಸ್ಸೆಸ್‌ಗೆ ಅವಕಾಶ ಕೊಟ್ಟಿರುವುದನ್ನು ಕಂಡಿದ್ದೇವೆ. ಹಾಗಾಗಿ ನೀವು ಸಿಂಪಥಿಗಿಟ್ಟಿಸಲು ಫೋನ್‌ ಮಾಡಿಸಿ ಜನರ ಸಿಂಪಥಿಗಿಟ್ಟಿಸಲು ಅದನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮೊಸಳೆ ಕಣ್ಣೀರು ಹರಿಸುವುದನ್ನು ಜನರು ಕಂಡಿದ್ದಾರೆ ಎಂದರು.

✅Business Offer: TUZHAR ಮೂಲಕ ನಿಮ್ಮ ಸ್ವಂತ ಉದ್ಯಮದ ಕನಸನ್ನು ನನಸಾಗಿಸಿ. ಕಡಿಮೆ ಹೂಡಿಕೆ, ಕಚ್ಛಾವಸ್ತು ಪೂರೈಕೆ, ಮಾರುಕಟ್ಟೆ ಮಾರ್ಗದರ್ಶನ ಹಾಗೂ ಮಾರಾಟ ಬೆಂಬಲದೊಂದಿಗೆ “ಅಲ್ ನಜೀಮ್ ಅಸ್ ಸಖಿಬ್” ಸುಗಂಧ ದ್ರವ್ಯ ವ್ಯಾಪಾರಿಗಳೊಂದಿಗೆ ಸುಗಂಧ ದ್ರವ್ಯ ವ್ಯವಹಾರ ಪ್ರಾರಂಭಿಸಿ ಸ್ವಾವಲಂಬಿಗಳಾಗಿ 📲 +918088947906

ಮಲಗಿದವರನ್ನು ಎಬ್ಬಿಸಬಹುದು ಆದರೆ ಮಲಗಿದಂತೆ ನಾಟಕವಾಡಿದವರನ್ನು ಎಬ್ಬಿಸಲು ಆಗದು. ನಾನೂ ಕೂಡಾ ಆರೆಸ್ಸೆಸ್‌ ಸ್ವಯಂಸೇವಕ. ನಾನೂ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದೇನೆ. ಮಕ್ಕಳೂ ಕೂಡ ಭಾಗವಹಿಸುಸುತ್ತಿದ್ದಾರೆ. ಆರೆಸ್ಸೆಸ್‌ ಲೆಕ್ಕಾಚಾರ ಕೇಳಲು ನೀವು ಯಾರು? ಧೇಶ ಭಕ್ತ ಸಂಘಟನೆಯನ್ನು ವಿರೋಧ ಮಾಡುವ ನೀವು ಪಾಕಿಸ್ತಾನಕ್ಕೆ ಜೈಕಾರ ಹಾಕ್ತೀರಿ, ಕುಕ್ಕರ್‌ ಬಾಂಬರನ್ನು ಸಮರ್ಥನೆ ಮಾಡ್ತೀರಿ ನಾಚಿಕೆ ಆಗ್ಬೇಕು. ಜನರು ನಿಮಗೆ ತಕ್ಕ ಉತ್ತರ ಕೊಡುತ್ತಾರೆ. ನಿಮ್ಮ ಜಿಲ್ಲೆಗೆ ಒಂದು ರಸ್ತೆ ಮಾಡಲಾಗದ ನೀವು ಆರೆಸ್ಸೆ ಬಗ್ಗೆ ಮಾತಾಡ್ತೀರಿ. ನೀವು ಕ್ಷಮೆ ಯಾಚಿಸುವ ಸಂದರ್ಭ ಬಂದಾಗ ಆಗ ನಾವು ಉತ್ತರ ಕೊಡ್ತೀವಿ. ಹಾಗಾಗಿ ನೀವು ಕೂಡಲೇ ನೀವು ಆರೆಸ್ಸೆಸ್‌ನ ಕ್ಷಮೆ ಯಾಚಿಸಬೇಕು ಎಂದರು.

error: Content is protected !!