ಜೆಸಿಐ ವತಿಯಿಂದ ಅ.18ರಿಂದ ‘ಕಹಳೆ 2025’
ಪದ್ಮಶ್ರೀ ಮಂಜಮ್ಮ ಜೋಗತಿ ವಿಶೇಷ ಉಪನ್ಯಾಸ – ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ಗೆ ಜೀವಮಾನ ಸಾಧಕ ಪುರಸ್ಕಾರ
ಮಂಗಳೂರು: ಜೆಸಿಐ ಇಂಡಿಯಾ ವಲಯ 15ರ ವಾರ್ಷಿಕ ಎರಡು ದಿನಗಳ ವಲಯ ಸಮ್ಮೇಳನ ‘ಕಹಳೆ 2025’ ಅಕ್ಟೋಬರ್ 18 ಮತ್ತು 19ರಂದು ಮಂಗಳೂರಿನ ಸ್ವಸ್ತಿಕ್ ವಾಟರ್‌ಫಂಟ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಇದರ ಆತಿಥ್ಯವನ್ನು ಜೆಸಿಐ ಮಂಗಳೂರು ಸಾಮ್ರಾಟ್ ಘಟಕ ಆತಿಥ್ಯ ವಹಿಸಿದ್ದಾಗಿ ಸಮ್ಮೇಳನ ನಿರ್ದೇಶಕ ಜೆಸಿಐ ಸೆನ್ ಡಾ. ರಾಘವೇಂದ್ರ ಹೊಳ್ಳ ತಿಳಿಸಿದ್ದಾರೆ.
ಅವರು ಮಂಗಳೂರಿನ ಪತ್ರಿಕಾಭವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ. ಸಮ್ಮೇಳನದ ಪೂರ್ವಮೆರವಣಿಗೆ ಅ.18 ರಂದು ಸಂಜೆ 5 ಗಂಟೆಗೆ ನಡೆಯಲಿದ್ದು, ಬಳಿಕ ಸಂಜೆ 5.30ಕ್ಕೆ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದರು.
ಸಮ್ಮೇಳನದ ವೇಳೆ ಮಾಜಿ ಸಚಿವ ಹಾಗೂ ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ಜೆ. ಪಾಲೆಮಾರ್ ಅವರಿಗೆ ಜೀವಮಾನ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸಮ್ಮೇಳನ ನಿರ್ದೇಶಕ ಜೆಸಿಐ ಸೆನ್ ಡಾ. ರಾಘವೇಂದ್ರ ಹೊಳ್ಳ ತಿಳಿಸಿದ್ದಾರೆ.
ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಅಧ್ಯಕ್ಷ ಜೆಸಿ ಎಚ್‌ಜಿಎಫ್ ಯತೀಶ ಕೆ.ಎಸ್., ಸಮ್ಮೇಳನಕ್ಕೆ ಜೆಸಿಐ ಇಂಡಿಯಾದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಎಸ್ ಪುರಂದರ ರೈ ಚಾಲನೆ ನೀಡಲಿದ್ದಾರೆ. ವಲಯ 15ರ ಅಧ್ಯಕ್ಷ ಜೆಸಿಐ ಸೆನ್ ಅಭಿಲಾಷ್ ಬಿ.ಎ. ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಸದಸ್ಯರಿಗೆ ನಾಯಕತ್ವ, ಸಂವಹನ ಹಾಗೂ ಸಮಾಜಮುಖಿ ಚಟುವಟಿಕೆಗಳ ತರಬೇತಿ ನೀಡಲಾಗಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ಬಿ. ಮಂಜಮ್ಮ ಜೋಗತಿ ಅವರಿಂದ ವಿಶೇಷ ಪ್ರೇರಣಾದಾಯಕ ಉಪನ್ಯಾಸ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಜೆಎಫ್‌ಎಸ್ ಅಶೋಕ್ ಆರ್. ಭಟ್ (ಎಕ್ಸಿಕ್ಯೂಟಿವ್ ಆಫೀಸರ್), ಜೆಎಫ್‌ಎಸ್ ವೈ. ಸುಕುಮಾರ್, ಜೆಎಫ್‌ಆರ್ ಅಲೆನ್ ರೋಹನ್ ವಾಝ್, ಜೆಸಿಐ ಪಿಪಿಪಿ ಗಿರೀಶ್ ಎಸ್.ಪಿ., ಜೆಎಫ್‌ಜೆ ಪಿಡಿಎಂ ಆಶಾ ಅಲೆನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಅಭಿಲಾಷ್ ಬಿ.ಎ. ತಿಳಿಸಿದರು.
ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೂ ನಡೆಯಲಿವೆ — ಆಹಾರ ಮೇಳ, ಪೂಜಾ ಕುಣಿತ, ಫ್ಯಾಷನ್ ಶೋ, ಯೂತ್ ಇನ್‌ಫ್ಲುಯೆನ್ಸರ್ ಸಂವಾದ, ಸಾಧಕ ಸದಸ್ಯರಿಗೆ ಪ್ರಶಸ್ತಿ ಪ್ರದಾನ, ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ, ರಕ್ತದೊತ್ತಡ ಪರೀಕ್ಷೆ, ರಕ್ತ ಪರೀಕ್ಷೆ, ಫಿಸಿಯೋಥೆರಪಿ ತರಬೇತಿ, ಜೊತೆಗೆ ಬೋಟ್ ರೈಡ್ ಮತ್ತು ಟೀಮ್ ಸ್ವಸ್ತಿಕ್‌ನಿಂದ ಪಿಲಿ ನಲಿಕೆ ಕಾರ್ಯಕ್ರಮ ವಿಶೇಷ ಆಕರ್ಷಣೆ ಆಗಲಿದೆ.
ಈ ಸಮ್ಮೇಳನವು ಯುವಕರಲ್ಲಿ ನಾಯಕತ್ವ, ಸಂಘಟನೆ, ಸಂವಹನ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ವೇದಿಕೆ ಆಗಿ ಕಾರ್ಯನಿರ್ವಹಿಸಲಿದೆ ಎಂದು ವಲಯ ಅಧ್ಯಕ್ಷ ಜೆಸಿಐ ಸೆನ್ ಅಭಿಲಾಷ್ ಬಿ.ಎ. ತಿಳಿಸಿದ್ದಾರೆ.
📞 ಹೆಚ್ಚಿನ ಮಾಹಿತಿಗೆ 9901326167 / 8453405995 ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ವಲಯ ಉಪಾಧ್ಯಕ್ಷ ಜೆಸಿ ಸುಹಾಸ್ ಮರಿಕೆ, ವಲಯ ಕಾರ್ಯದರ್ಶಿ ಜೆಸಿ ರವಿಚಂದ್ರ ಪಾಟಾಳಿ ಉಪಸ್ಥಿತರಿದ್ದರು.