ಮೂಡಬಿದ್ರೆ: ಸ್ವಲ್ಪದರಲ್ಲೇ ತಪ್ಪಿದ ಬಾಲಕಿಯರ “ಗ್ಯಾಂಗ್‌ ರೇಪ್”: ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಸಮಯಪ್ರಜ್ಞೆಗೆ ವ್ಯಾಪಕ ಶ್ಲಾಘನೆ!!

ಮೂಡಬಿದ್ರೆ: ಪೊಲೀಸ್ ಇನ್‌ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ಸಮಯಪ್ರಜ್ಞೆಯಿಂದ ಸಾಮೂಹಿಕ ಅತ್ಯಾಚಾರ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಿದ್ದು, ಇಬ್ಬರು ಹದಿಹರೆಯದ ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ.

ಬಂಧಿತ ಆರೋಪಿಗಳು

ನಿಡ್ಡೋಡಿ ಕಲ್ಲಕುಮೇರ್‌ ನಿವಾಸಿ ಮಹೇಶ್‌, ಕಟೀಲು ಕೊಂಡೆಮೂಲ ನಿವಾಸಿ ಯಜ್ಞೇಶ್, ಮೂಲ್ಕಿ ನಡುಗೋಡು ನಿವಾಸಿ ದಿಲೀಪ್ ಯಾನೆ ದೀಪು ಹಾಗೂ ಕೊಂಡೆಮೂಲ ನಿವಾಸಿ ಶ್ರೀಕಾಂತ್ ಬಂಧಿತ ಆರೋಪಿಗಳಾಗಿದ್ದಾರೆ.

ಈ ಪೈಕಿ ಎ1 ಆರೋಪಿ ನಿಡ್ಡೋಡಿ ಕಲ್ಲಕುಮೇರ್‌ ನಿವಾಸಿ ಮಹೇಶ್‌ ಒಬ್ಬಳು ಬಾಲಕಿಯನ್ನು ಅತ್ಯಾಚಾರ ನಡೆಸಿದ್ದು, ಈತನ ವಿರುದ್ಧ ಪೋಕ್ಸೋ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಉಳಿದ ಮೂವರು ಆರೋಪಿಗಳ ವಿರುದ್ಧವೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ:
17ರ ಹರೆಯದ ಬಾಲಕಿಯನ್ನು ಪ್ರೀತಿಸುವ ಹೆಸರಲ್ಲಿ ಬುಟ್ಟಿಗೆ ಹಾಕಿಕೊಂಡಿದ್ದ ಮಹೇಶ್ ಆಕೆಯೊಂದಿಗೆ ಇನ್ನೊಬ್ಬಳನ್ನೂ  ಪುಸಲಾಯಿಸಿ ನಿಡ್ಡೋಡಿಯ ಯಾರೂ ಇಲ್ಲದ ಮನೆಗೆ ಕರೆದುಕೊಂಡು ಬಂದಿದ್ದ. ಬಳಿಕ ತನ್ನ ಮೂವರು ಸ್ನೇಹಿತರಿಗೂ ತಿಳಿಸಿ ಅವರನ್ನೂ ಅಲ್ಲಿಗೆ ಬರಲು ಹೇಳಿದ್ದನು. ‌ ಮಹೇಶ್‌ ಓರ್ವಳಿಗೆ ಅತ್ಯಾಚಾರವೆಸಗಿದ ಬಳಿಕ ಉಳಿದ ಆರೋಪಿಗಳು ಗ್ಯಾಂಗ್‌ ರೇಪ್‌ ಮಾಡಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಕಾಮೋತ್ತೇಜಕ ಸ್ಪ್ರೇ, ಕಾಂಡೋಮ್ ಸಹಿತ ಇತರ ವಸ್ತುಗಳನ್ನು ತಂದಿದ್ದರು. ಉಳಿದವರು ಗ್ಯಾಂಗ್‌ ರೇಪ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ನೇತೃತ್ವದ ತಂಡ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ.

ಸಂದೇಶ್‌ ಪಿ.ಜಿ. ಕಾರ್ಯವೈಖರಿಗೆ ಮೆಚ್ಚುಗೆ:

ಇನ್ಸ್‌ಪೆಕ್ಟೆರ್‌ ಸಂದೇಶ್‌ ಪಿ.ಜಿ.

ಇನ್ಸ್ ‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಂದೇಶ್‌ ಅವರು ಹಲವರು ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಹಲವು ಪ್ರಕರಣಗಳನ್ನು ಭೇದಿಸಿ ದಕ್ಷ ಅಧಿಕಾರಿ ಎಂಬ ಹೆಸರಿಗೆ ಪಾತ್ರವಾಗಿದ್ದಾರೆ. ಈ ರೀತಿಯ ಪೊಲೀಸರಿಂದ ಪೊಲೀಸ್‌ ಇಲಾಖೆಯ ಘನತೆ ಹೆಚ್ಚಿದೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಸಂದೇಶ್ ಅವರು ಮೂಡಬಿದ್ರಿ ಪೊಲೀಸ್ ಠಾಣೆಗೆ ಆಗಮಿಸಿದ ಬಳಿಕ ಹತ್ತಾರು ಪ್ರಮುಖ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಸಮಿತ್ ರಾಜ್ ಧರೆಗುಡ್ಡೆಯಂತಹ ಹಿಂದುತ್ವದ ಸೋಗುಹಾಕಿದ್ದ “ಕ್ರಿಮಿ”ಯನ್ನು ಹಿಂದೂ ಯುವತಿಯರ ಲೈಂಗಿಕ ಶೋಷಣೆ ಪ್ರಕರಣಗಳಲ್ಲಿ ಬಂಧಿಸಿ ಜೈಲಿಗಟ್ಟುವ ಮೂಲಕ ಕ್ರಿಮಿನಲ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದರು.

error: Content is protected !!