ಮುದ್ದೇಬಿಹಾಳ: 19 ವರ್ಷದ ಯುವತಿಯೊಬ್ಬಳ ಶವ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಯುವತಿಯನ್ನು ಮುದ್ದೇಬಿಹಾಳ ತಾಲೂಕು ಬನೋಶಿ ಗ್ರಾಮದ ಬಸಮ್ಮ ಮಾನಪ್ಪ ಚಲವಾದಿ ಎಂದು ಗುರುತಿಸಲಾಗಿದೆ. ಇನ್ನೂ ಮದುವೆಯಾಗದ ಆಕೆಯ ಕೊರಳಲ್ಲಿ ತಾಳಿ ಇರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಲ್ಲಪ್ಪ ನಂದಗಾಂವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸೈ ಸಂಜಯ್ ತಿಪ್ಪರಡ್ಡಿ ಸಿಬ್ಬಂದಿ ಸಮೇತ ತೆರಳಿ ಕಾನೂನು ಪ್ರಕ್ರಿಯೆ ಕೈಕೊಂಡಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.