ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಸ್ಮೃತಿ ಮಂಧಾನ – ತಮ್ಮ ಬ್ಯಾಟಿಂಗ್ ಕೌಶಲ್ಯದಿಂದಲೂ, ಸೌಂದರ್ಯದಿಂದಲೂ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ — ಆದರೆ ಈ ಬಾರಿ ಕಾರಣ ಕ್ರಿಕೆಟ್ ಅಲ್ಲ, ಬದಲಿಗೆ ಆ ಒಂದುಫೋಟೋ!
ಪ್ರಸ್ತುತ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮಂಧಾನ ಅದ್ಭುತ ಫಾರ್ಮ್‌ನಲ್ಲಿ ಮಿಂಚುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು 66 ಎಸೆತಗಳಲ್ಲಿ 80 ರನ್ ಬಾರಿಸಿದರು. ಭಾರತದ ಸೋಲಾದರೂ, ಮಂಧಾನ ಅನೇಕ ದಾಖಲೆಗಳನ್ನು ಬರೆದಿದ್ದಾರೆ.
ಈ ವರ್ಷ 1000 ಏಕದಿನ ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ವುಮನ್ ಎಂಬ ಕೀರ್ತಿಗೂ ಪಾತ್ರರಾದರು. ಮಹಿಳಾ ಏಕದಿನಗಳಲ್ಲಿ ಅತ್ಯಂತ ವೇಗವಾಗಿ 5000 ರನ್‌ಗಳು ತಲುಪಿ ದಾಖಲಡೆ ಬರೆದರು. ಆಸ್ಟ್ರೇಲಿಯಾ ವಿರುದ್ಧ ಐದು 50+ ಸ್ಕೋರ್‌ಗಳು ಗಳಿಸಿದ ಮೊದಲ ಮಹಿಳಾ ಬ್ಯಾಟ್ಸ್‌ವುಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಸ್ಮೃತಿ ಮಂಧಾನ ಅವರ “ಸಿಕ್ಸ್‌ಪ್ಯಾಕ್” ಫೋಟೋಗಳು ವೈರಲ್ ಆಗಿವೆ. ನೆಟ್ಟಿಗರು “ಮಂಧಾನ ಕೊಹ್ಲಿಗಿಂತಲೂ ಫಿಟ್!” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿರುವಾಗ, ಕೆಲವರು “ಈ ಫೋಟೋ ನಕಲಿಯೋ ಅಸಲಿಯೋ” ಎಂದು ಪ್ರಶ್ನೆ ಎತ್ತಿದ್ದಾರೆ.
ಅಸಲಿಗೆ ಆ ಫೋಟೋ ಎಐ ಜನರೇಟೆಡ್ (AI-generated) ಎನ್ನುವುದು ನಿಜ. ಮೂಲ ಫೋಟೋದಲ್ಲಿ ಮಂಧಾನ ಅಭ್ಯಾಸದ ವೇಳೆ ಟಿ-ಶರ್ಟ್ ಎತ್ತಿಕೊಂಡು ಮುಖ ಒರೆಸುತ್ತಿರುವುದು ಮಾತ್ರ ಇದೆ. ಆದರೆ, ಅದನ್ನು ಆಧಾರವಿಟ್ಟು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸಿಕ್ಸ್‌ಪ್ಯಾಕ್ ಮಾದರಿಯಲ್ಲಿ ಬದಲಾಯಿಸಲಾಗಿದೆ. ಸೂಕ್ಷ್ಮವಾಗಿ ನೋಡಿದರೆ, ಫೋಟೋದ ಗುಣಮಟ್ಟ ಮತ್ತು ಬೆಳಕಿನ ವ್ಯತ್ಯಾಸಗಳು ಸ್ಪಷ್ಟವಾಗುತ್ತವೆ. ಹೀಗಾಗಿ ಅದು ನಕಲಿ ಚಿತ್ರವೆಂದು ಖಚಿತವಾಗಿದೆ.
ಆದರೂ ಒಂದು ನಿಜ ವಿಷಯ ಏನೆಂದರೆ ಸ್ಮೃತಿ ಮಂಧಾನ ತಮ್ಮ ಫಿಟ್‌ನೆಸ್‌ಗಾಗಿ ಬದ್ಧರಾಗಿದ್ದು, ಕಠಿಣ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.