ಚಿಕ್ಕಮಗಳೂರು: ಕಾರು-ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿಯಾದ ಘಟನೆ ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ಬಳಿ ಇಂದು(ಅ.13) ನಡೆದಿದೆ.
ಅದೃಷ್ಟವಶಾತ್ ಕಾರಿನ ಚಾಲಕ ವಿನಯ್ ಸಣ್ಣಪುಟ್ಟ ಗಾಯದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ನ ದೊಡ್ಡ ಚಕ್ರಗಳು ಮುರಿದು ಬಿದ್ದಿದ್ದು, ಕಾರಿನ ಡ್ರೈವರ್ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಸ್ತೆ ಬದಿ ಬೆಳೆದಿರುವ ಗಿಡಘಂಟೆಗಳು ಇರುವುದರಿಂದ ತಿರುವಿನಲ್ಲಿ ರಸ್ತೆ ಕಾಣದೇ ಈ ರೀತಿ ಅಪಘಾತ ಉಂಟಾಗುತ್ತವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.