ಕೊಪ್ಪಳ: 17 ವರ್ಷದ ಬಾಲಕಿಯ ಮೇಲೆ ಗ್ರಾಮ ಪಂಚಾಯತಿ ನೌಕರನೊಬ್ಬ ಹಲ್ಲೆನಡೆಸಿ ಅತ್ಯಾಚಾರವೆಸಗಿದ ಘಟನೆ ಭಾನುವಾರ(ಅ.12) ಕುಷ್ಟಗಿ ತಾಲೂಕಿನ ಗ್ರಾಮವೊಂದರಲ್ಲಿ ವರದಿಯಾಗಿದೆ.
ಯಲಬುರ್ಗಾ ತಾಲೂಕಿನ ಗ್ರಾಂ ಪಂ. ಕರವಸೂಲಿಗಾರ ಬೀರಪ್ಪ ಇಲಕಲ್ (27) ಅತ್ಯಾಚಾರವೆಸಗಿದ ಆರೋಪಿ.
ಬಾಲಕಿಯನ್ನು ಹೊಲದಲ್ಲಿ ಬಲವಂತವಾಗಿ ಹೊತ್ತೊಯ್ದು ಹಲ್ಲೆ ನಡೆಸಿ ಅತ್ಯಾಚಾರವೆಸಗಿರುವ ಹಿನ್ನಲೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಬಾಲಕಿಯ ತಾಯಿ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕುಷ್ಟಗಿ ಸಿಪಿಐ ಅವರು ತಿಳಿಸಿದ್ದಾರೆ.