Breaking News!!! ಸುರತ್ಕಲ್‌: ಕಾಂತೇರಿ ಧೂಮಾವತಿ ದೈವಸ್ಥಾನ ಸಮೀಪದ ಅಂಗಡಿಯಿಂದ ನಾಲ್ಕು ಲಕ್ಷ ರೂ. ಕಳವು

ಮಂಗಳೂರು: ಸುರತ್ಕಲ್‌ನ ಕಾಂತೇರಿ ಧೂಮಾವತಿ ದೈವಸ್ಥಾನದ ಸಮೀಪದಲ್ಲಿರುವ ಕ್ಯಾಂಡಿಮಾರ್ಟ್‌ ಎನ್ನುವ ಹೋಲ್‌ಸೇಲ್ ಅಂಗಡಿಗೆ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ಸುಮಾರು ನಾಲ್ಕು ಲಕ್ಷ ರೂ. ನಗದು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಳ್ಳರ ಚಲನವಲನವು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಪೊಲೀಸರು ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದಾರೆ.

ಅಂಗಡಿ ಮಾಲೀಕರು ಪಾವತಿಗಾಗಿ ಇಟ್ಟಿದ್ದ ಹಣವನ್ನು ಕಳ್ಳರು ತೆಗೆದುಕೊಂಡಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಪ್ರಮೋದ್‌ ಅವರ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳವು ಪರಿಚಿತರಿಂದಲೇ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರ ತಂಡ ತೆರಳಿ ಶೋಧ ನಡೆಸಿದೆ.

ಪೊಲೀಸರು ಕಳ್ಳರ ಗುರುತು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದಾರೆ.

ಸುರತ್ಕಲ್‌ನಲ್ಲಿ ಕಳವು ಯತ್ನ ಹೆಚ್ಚಳ: ರಾತ್ರಿ ವೇಳೆ ಕತ್ತಿ ಹಿಡಿದ ಯುವಕರ ಚಲನವಲನದಿಂದ ಬೆಚ್ಚಿದ ಸ್ಥಳೀಯರು!

error: Content is protected !!