ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೇರಳ ಮುಖ್ಯಮಂತ್ರಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೋದಿಯವರನ್ನು ಕೇರಳದ ಸಿಎಂ ಪಿಣರಾಯಿ ವಿಜಯನ್ ಅವರು ಇಂದು(ಅ.10) ಭೇಟಿ ಮಾಡಿದ್ದಾರೆ.

ವಯನಾಡ್ ಭೂಕುಸಿತ ಸಂಬಂಧಿತ ಪುನರ್ ನಿರ್ಮಾಣ ಕಾರ್ಯಗಳಿಗಾಗಿ 2,221.03 ಕೋಟಿ ರೂ. ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ.

ವಯನಾಡ್ ಭೂಕುಸಿತ ಪ್ರದೇಶಗಳ ಪರಿಹಾರ ಕಾರ್ಯಗಳಿಗೆ ಹಣ ನೀಡುವುದರ ಜೊತೆಗೆ, ಕೋಝಿಕೋಡ್‌ನ ಕಿನಲೂರಿನಲ್ಲಿ ಏಮ್ಸ್ ಸ್ಥಾಪಿಸಲು ಅನುಮೋದನೆ ನೀಡುವಂತೆ ಮತ್ತು ರಾಜ್ಯದ ಸಾಲ ಮಿತಿಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಅನುಮೋದನೆಯನ್ನು ಕೋರಿದರು.

ಕೆಐಐಎಫ್‌ಬಿಯಂತಹ ವಿಶೇಷ ಉದ್ದೇಶದ ವಾಹನಗಳು ಸೇರಿದಂತೆ ಬಜೆಟ್‌ನಿಂದ ಹೊರತಾದ ಸಾಲಗಳನ್ನು ಕೇರಳದ ಒಟ್ಟು ಬಾಕಿ ಇರುವ ಸಾರ್ವಜನಿಕ ಸಾಲದ ಭಾಗವಾಗಿ ಪರಿಗಣಿಸಬಾರದು ಎಂದು ಕೇಂದ್ರವನ್ನು ವಿನಂತಿಸಿದರು. ಇದರಿಂದಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಹಣವನ್ನು ಸಂಗ್ರಹಿಸುವ ರಾಜ್ಯದ ಸಾಮರ್ಥ್ಯವನ್ನು ಮತ್ತಷ್ಟು ಕುಂಠಿತಗೊಳಿಸುತ್ತದೆ. ಕೇರಳದ ಸಾಲ ಮಿತಿಯನ್ನು ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) 0.5% ಗೆ ನಿಗದಿಪಡಿಸುವಂತೆ ಮನವಿ ಮಾಡಿದರು.

ಪ್ರಧಾನಿ ಭೇಟಿಗೂ ಮುನ್ನ ಸಿಎಂ ವಿಜಯನ್ ಅವರು ಕೇಂದ್ರ ಸಚಿವರಾದ ಅಮಿತ್ ಶಾ, ಜೆ ಪಿ ನಡ್ಡಾ, ನಿರ್ಮಲಾ ಸೀತಾರಾಮನ್ ಮತ್ತು ನಿತಿನ್ ಗಡ್ಕರಿ ಅವರನ್ನು ಗುರುವಾರ ಭೇಟಿ ಮಾಡಿದ್ದರು.

error: Content is protected !!