ಮಂಗಳೂರು: ಭಜನೆಯ ಮೂಲಕ ಯುವ ಪೀಳಿಗೆಯಲ್ಲಿ ಭಕ್ತಿ ಮತ್ತು ಸಂಸ್ಕೃತಿಯ ಬೀಜವನ್ನು ಬಿತ್ತುವ ಉದ್ದೇಶದೊಂದಿಗೆ “ಬಾಲ ಭಜನಾ ವೈಭವ” ಸ್ಪರ್ಧೆಯನ್ನು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಇದರ ಕೆನರಾ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಡಿಸೆಂಬರ್ 20 ಹಾಗೂ 21 ರಂದು ಮಂಗಳೂರಿನ ಟಿ ವಿ ರಮಣ್ ಪೈ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದೆ.
ಪ್ರಥಮ ಸ್ಥಾನ ವಿಜೇತ ತಂಡಕ್ಕೆ 50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ. ರನ್ನರ್ ಅಪ್ ತಂಡಕ್ಕೆ 25 ಸಾವಿರ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿ, ಭಾಗವಹಿಸಿದ ಪ್ರತಿ ತಂಡಕ್ಕೆ ಪ್ರೋತ್ಸಾಹಧನವಾಗಿ ಐದು ಸಾವಿರ ರೂಪಾಯಿ ನಗದು ನೀಡಲಾಗುವುದು.
ಗರಿಷ್ಟ 17 ವರ್ಷ ಮೀರದ ಅಥವಾ ಗರಿಷ್ಟ ಈಗ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗ/ಹುಡುಗಿ ಇದರಲ್ಲಿ ಭಾಗವಹಿಸಬಹುದಾಗಿದೆ. ಒಬ್ಬ ಸದಸ್ಯ ಒಂದು ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ. ಪ್ರತಿ ತಂಡದಲ್ಲಿ ಕನಿಷ್ಟ 8 ಹಾಗೂ ಗರಿಷ್ಟ 12 ಸದಸ್ಯರು ( ಹಾರ್ಮೋನಿಯಂ ಹಾಗೂ ತಬಲಾ ವಾದಕರು ಸೇರಿ) ಇರಬೇಕಾಗಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಕ್ಕಳು, ಭಜನಾ ಮಂಡಳಿಗಳು ಇದರಲ್ಲಿ ಭಾಗವಹಿಸಬಹುದು.
ಸಂತ ಶಿಶುನಾಳ ಷರೀಫ್ ಪ್ರಶಸ್ತಿ ಪುರಸ್ಕೃತ ಪುತ್ತೂರು ನರಸಿಂಹ ನಾಯಕ್ ಅವರ ಮಾರ್ಗದರ್ಶನದಲ್ಲಿ, ಸಂಗೀತ, ಸಾಹಿತ್ಯ ಕ್ಷೇತ್ರದ ಪರಿಣಿತ ತೀರ್ಪುಗಾರರ ಉಪಸ್ಥಿತಿಯಲ್ಲಿ, ಉತ್ತಮ ಧ್ವನಿ ಬೆಳಕಿನ ವ್ಯವಸ್ಥೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 20 ಹೆಸರು ನೊಂದಾಯಿಸಲು ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು – 7022483333 .ಇಲ್ಲಿ ನೀಡಿರುವ ಪೋಸ್ಟರ್ ನಲ್ಲಿ ಕ್ಯೂಆರ್ ಕೋಡ್ ಇದ್ದು, ಅದನ್ನು ಸ್ಕ್ಯಾನ್ ಮಾಡಿ ಹೆಸರು ನೊಂದಾಯಿಸಬೇಕಾಗಿ ವಿನಂತಿ.