ಎಸೆಸೆಲ್ಸಿ ಪರೀಕ್ಷೆ ನೋಂದಣಿಗೆ ಅ.31 ಕೊನೆ ದಿನ

ಬೆಂಗಳೂರು: 2026ರ ಮಾರ್ಚ್‌/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ಪರೀಕ್ಷೆ-1ಕ್ಕೆ ವಿದ್ಯಾರ್ಥಿಗಳ ನೋಂದಣಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ವಿದ್ಯಾರ್ಥಿಗಳ ವಿವರ ನೋಂದಣಿ ಮಾಡಲು ಅರ್ಜಿ ಆಹ್ವಾನಿಸಿದೆ. ನೋಂದಣಿಗೆ ಅ.31 ಕೊನೆಯ ದಿನಾಂಕವೆಂದು ತಿಳಿಸಿದ್ದಾರೆ.

2011ಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾಗಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಬಾಕಿ ಇರುವ ವಿಷಯಗಳಿಗೆ 2022ರ ಮುಖ್ಯ ಪರೀಕ್ಷೆಯಿಂದ 6 ಪ್ರಯತ್ನಗಳ ಅವಕಾಶ ನೀಡಿ ಪರೀಕ್ಷೆ-2ರಲ್ಲೂ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಇದಾದ ಬಳಿಕವೂ ಅನುತ್ತೀರ್ಣರಾದವರು, 6 ಪ್ರಯತ್ನ ಮೀರಿದವರು ನಿಯಮಾನುಸಾರ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲ ವಿಷಯಗಳ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

error: Content is protected !!