ಹಳೆಯಂಗಡಿ: ಸುಮಾರು 20 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಇತರ ಸಮಾಜಮುಖಿ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಹಳೆಯಂಗಡಿ ಚೇಳಾಯರು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ(ರಿ) ತನ್ನ ಹೊಸ ಸಮುದಾಯ ಭವನದ ಉದ್ಘಾಟನೆಗೆ ಸಜ್ಜಾಗಿದೆ. ಹೊಸ ಭವನದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 12, 2025 (ರವಿವಾರ) ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಶ್ರೀನಿವಾಸ್ ಅಮೀನ್ ಹೇಳಿದರು.
ನೂತನ ಸಮುದಾಯಭವದಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಘಾಟನೆಯ ಮುನ್ನದಿನ ಅಕ್ಟೋಬರ್ 11 (ಶನಿವಾರ) ರಂದು ಬೆಳಿಗ್ಗೆ 8.30ರಿಂದ ಧಾರ್ಮಿಕ ವಿಧಿ ವಿಧಾನದ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಮರು ದಿನ, ಅ.12ರಂದು ಬೆಳಿಗ್ಗೆ 5.00 ಗಂಟೆಗೆ ದೇವತಾ ಪೂಜೆ, ನಂತರ 9.00 ಗಂಟೆಗೆ ಧಾರ್ಮಿಕ ವಿಧಿ, ಧ್ವಜಾರೋಹಣ, ಮಹಾ ಮಂಗಳಾರತಿ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸಮುದಾಯ ಭವನ ಉದ್ಘಾಟನೆ ಮತ್ತು ರಾಜ್ಯದ ಪ್ರಮುಖ ಮುಖಂಡರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ 5 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ಯ ವೈವಿಧ್ಯ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ʻಪರಮಾತ್ಮೆ ಪಂಜುರ್ಲಿʼ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಂಸ್ಥೆಯು ಸಾರ್ವಜನಿಕರಿಗೆ ಆಹ್ವಾನ ನೀಡಿದ್ದು, “ಸಮುದಾಯದ ಏಕತೆ ಮತ್ತು ಪರಂಪರೆಯ ಗೌರವವನ್ನು ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಶ್ರೀನಿವಾಸ್ ಅಮೀನ್ ತಿಳಿಸಿದರು.
ಕಾರ್ಯದರ್ಶಿ ರಾಘವ ಸನಿಲ್, ಕೋಶಾಧಿಕಾರಿ ಗುರುವಪ್ಪ ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಜಯಾನಂದ ಚೇಳಾಯರು, ಮಹಿಳಾ ಅಧ್ಯಕ್ಷ ಮಾಲತಿ ಆರ್ ಪೂಜಾರಿ ಕಾರ್ಯಧ್ಯ ಶ್ರೀಕಾಂತ್ ಪೂಜಾರಿ ಪುರಂದರ ಪೂಜಾರಿ ರಾಜೇಶ್ ಪೂಜಾರಿ ದಯಾನಂದ ಪೂಜಾರಿ ರಮೇಶ್ ಸಾಲಿಯಾನ್, ಮಹಿಳಾ ಘಟಕದ ಕಾರ್ಯದರ್ಶಿ, ರೇಖಾ, ಕವಿತಾ, ಸುಜಯ, ಸುರೇಖಾ ಮತ್ತಿತರರು ಉಪಸ್ಥಿತರಿದ್ದರು.