ನೂತನ ʻತುಝರ್‌ʼ ಪರ್ಫ್ಯೂಮ್‌ ಲೋಕಾರ್ಪಣೆ: ಸಂಸ್ಥೆಯ ಯಶಸ್ವಿಗೆ ಶುಭ ಹಾರೈಸಿದ ಗಣ್ಯರು!

ಮಂಗಳೂರು: ಅಲ್ ನಜೀಂ ಉಸ್ ಸಕೀಬ್ ಪರ್ಫ್ಯೂಮ್ ಟ್ರೇಡರ್ಸ್ ಸಂಸ್ಥೆಯ ಅಬ್ದುಲ್‌ ಹಮೀದ್‌ ಅವರ ಮಾಲಕತ್ವದಲ್ಲಿ ಹೊಚ್ಚ ಹೊಸ ಫರ್ಫ್ಯೂಮ್‌ ಬ್ರಾಂಡ್ ‘ತುಝರ್ (TUZHAR)’ ಉತ್ಪನ್ನವನ್ನು ಯೆನೆಪೊಯ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ ಅಕ್ಟೋಬರ್ 9ರಂದು ಮಂಗಳೂರು ಬೆಂದೂರ್‌ವೆಲ್‌ನ ಅಗ್ನೆಸ್ ಕಾಲೇಜು ಪಕ್ಕದ ಸೇಂಟ್ ಸೆಬಾಸ್ಟಿಯನ್ ಮಿನಿ ಹಾಲ್‌ನಲ್ಲಿ ಬಿಡುಗಡೆಗೊಳಿಸಿದರು.

ಆರಂಭದಲ್ಲಿ ಬಲೂನ್‌ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಕದ ಪರದೆ ಎಳೆಯುವ ಮೂಲಕ ಸಂಸ್ಥೆಯ ಲೋಗೋ ಬಿಡುಗಡೆ ಮಾಡಿ ತುಝರ್‌ ಸಂಸ್ಥೆಯ ಸುಗಂಧ ದ್ರವ್ಯವನ್ನು ಲೋಕಾರ್ಪಣೆಗೊಳಿಸಿ ಶಭಕೋರಿ ಮಾತನಾಡಿದರು.

ಅಬ್ದುಲ್‌ ಹಮೀದ್‌ ಅವರು ಅತ್ಯಂತ ಪರಿಶ್ರಮಿ, ಆತ್ಮವಿಶ್ವಾಸಿಯಾಗಿದ್ದು, ಅದಕ್ಕೆ ಅವರು ಈ ಕಠಿಣ ಉದ್ಯಮಕ್ಕೆ ಕೈ ಹಾಕಿರುವುದೇ ಸಾಕ್ಷಿ. ಅವರ ಹಠ ಮತ್ತು ಕಾರ್ಯ ಸಾಧನೆಯಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಮೊದಲು ಸ್ವಚ್ಛತಾ ಉದ್ಯಮದಲ್ಲಿ ತೊಡಗಿಕೊಂಡಿದ್ದ ಅವರು ನಂತರ ಸುಗಂಧದ್ರವ್ಯ ತಯಾರಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಜೀವನದಲ್ಲಿ ಹಂತಹಂತವಾಗಿ ಮೇಲೆ ಬಂದಿರುವ ಅವರು ಇಂದು ಪ್ರಾರಂಭಿಸಿದ ನೂತನ ಸಂಸ್ಥೆಯು ನಮ್ಮ ಜಿಲ್ಲೆಯ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿ. ಅವರಿಗೆ ಶುಭವಾಗಲಿ ನಮ್ಮ ಊರಿನ ಜನರಿಗೆ ಇದರಿಂದ ಕೈತುಂಬಾ ಉದ್ಯೋಗ ಸಿಗಲಿ ಎಂದು ಅವರು ಹಾರೈಸಿದರು.

ಕಣಚೂರು ಹೆಲ್ತ್‌ ಸೈನ್ಸನ್‌ ಅಡ್ವೈಸರಿ ಸಂಸ್ಥೆಯ ಚೇರ್ಮ್ಯಾನ್‌, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮಾತನಾಡಿ, ಸುಗಂಧ ದ್ರವ್ಯ ಬಳಕೆ ಮಾಡುವುದು ನಮಗಾಗಿ ಅಲ್ಲ ಇತರರಿಗಾಗಿ. ಅದು ಬಹಳಷ್ಟು ಆಕರ್ಷಣೆಯನ್ನು ಒಳಗೊಂಡಿದೆ. ಅದರ ಬೆಲೆಯೂ ಅಷ್ಟೇ ಕೋಟ್ಯಂತರ ರೂಪಾಯಿ ಕೂಡ ಇರಬಹುದು. ಒಬ್ಬ ವ್ಯಕ್ತಿಯ ಘನತೆಯನ್ನು ಅದು ಉಳಿಸುತ್ತದೆ, ನಮ್ಮಲ್ಲಿ ಪಾಸಿಟಿವ್‌ ವೈಬ್‌ ಸೃಷ್ಟಿಸುತ್ತದೆ ಎಂದರು. ನಾನೊಂದು ಪರಿಮಳ ದ್ಯವ್ಯ ಕೊಟ್ಟು ಅದೇ ರೀತಿಯ ಉತ್ಪನ್ನ ಕೊಡಲು ಹೇಳಿದಾಗ ಕೇವಲ ನಾಲ್ಕೇ ದಿನಗಳಲ್ಲಿ ಅದೇ ರೀತಿಯ ಬ್ರಾಂಡ್‌ ಒದಗಿಸಿಕೊಟ್ಟರು. ವಿದೇಶದಲ್ಲಿ ಮಾತ್ರ ಪರ್ಫ್ಯೂಮ್‌ ತಯಾರಾಗುತ್ತದೆ ಎನ್ನುವ ಕಲ್ಪನೆಯನ್ನು ಮಾಸಿ, ಇದೀಗ ನಮ್ಮದೇ ದೇಶದಲ್ಲಿ ತಯಾರಿಸಲು ಹೊರಟಿರುವ ಅವರ ಶ್ರಮಕ್ಕೆ ತಕ್ಕ ಬೆಲೆ ಸಿಗಲಿ ಎಂದು ಹಾರೈಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿʼಸೋಜಾ ಮಾತನಾಡಿ, ಸುಗಂಧ ದ್ರವ್ಯ ಹಾಕುವಲ್ಲಿ ಜನರು ಆಸಕ್ತಿ ತೋರಿಸುತ್ತಿರುವುದು ಉತ್ತಮ ವಿಚಾರ. ಇದರಿಂದ ವ್ಯಕ್ತಿಗೆ ಒಂದು ಘನತೆ ಬರುತ್ತದೆ. ನೂತನ ಉದ್ಯಮಕ್ಕೆ ಕೈಹಾಕಿರುವ ಹಮೀದ್‌ ಅವರಿಗೆ ಶುಭವಾಗಲಿ ಎಂದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮೊಹಮ್ಮದ್ ಕುಂಞಿ ಮಾತನಾಡಿ, ಸುಗಂಧ ದ್ರವ್ಯ ಹಾಕುವುದು ಇಸ್ಲಾಮಿನಲ್ಲಿ ಅತ್ಯಂತ ಪವಿತ್ರವಾದುದು. ಉದ್ಯಮದಲ್ಲಿ ಅಪ್ಡೇಟ್‌ ಆಗುವುದು ಮುಖ್ಯ. ಇಸ್ಲಾಂನಲ್ಲಿ ದುಡಿಮೆ ಹಾಗೂ ಉದ್ಯಮಕ್ಕೆ ವಿಶೇಷ ಆದ್ಯತೆ ಇದ್ದು, ಹಮೀದ್‌ ಅವರಿಗೆ ದೇವನು ಆಶೀರ್ವದಿಸಲಿ ಎಂದು ಶುಭಕೋರಿದರು. ಎಸ್ಎಂಆರ್ ಗ್ರೂಪ್ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ಪ್ಲಾಸ್ಟಿಕ್ ಲ್ಯಾಂಡ್ ಗ್ರೂಪ್ ಅಧ್ಯಕ್ಷ ಅಸ್ಕರ್ ಅಲಿ, ಉದ್ಯಮಿ ಹಸನಬ್ಬ ಚಾರ್ಮಾಡಿ ಮತ್ತಿತರರು ನೂತನ ಉದ್ಯಮಕ್ಕೆ ಶುಭಕೋರಿದರು.

ಕಠಿಣ ಪರಿಶ್ರಮದಿಂದ ಮೇಲೆ ಬಂದೆ: ಅಬ್ದುಲ್‌ ಹಮೀದ್:


ಪೂರ್ವಭಾವಿ ಸ್ವಾಗತ ಭಾಷಣ ಮಾಡಿ ತುಝರ್ ಸಂಸ್ಥೆಯ ಎಂಡಿ ಅಬ್ದುಲ್‌ ಹಮೀದ್‌ ಮಾತನಾಡಿ, ನಾನು ಉಮ್ರಾ ಹೋಗಿದ್ದ ವೇಳೆ ಈ ಕನಸನ್ನು ಕಟ್ಟಿಕೊಂಡೆ ಅದು ಈಗ ನನಸಾಗಿದೆ. ಸುಗಂಧ ದ್ರವ್ಯ ಕುರಿತು ನನಗೆ ಆಸಕ್ತಿ ಶುರುವಾಯಿತು. ಮನೆಯ ಒಂದು ಸಣ್ಣ ಕೋಣೆಯನ್ನೇ ಲ್ಯಾಬ್ ಮಾಡಿಕೊಂಡು ಸುಗಂಧ ದ್ರವ್ಯ ತಯಾರಿ ಕುರಿತು ರೀಸರ್ಚ್ ಮಾಡಲು ಆರಂಭಿಸಿದೆ. ಅಲ್ಲಿಂದ 6 ತಿಂಗಳ ಕಾಲ ನಿರಂತರ ಪರಿಶ್ರಮದಿಂದ ಇಂದು ತುಝರ್ ಅನ್ನುವ ಬ್ರಾಂಡ್ ಅನ್ನು ಲೋಕಾರ್ಪಣೆಗೊಳಿಸುತ್ತಿದ್ದೇನೆ. ಡಾ.ಯೆನೆಪೋಯ ಅಬ್ದುಲ್ ಕುಂಞಿ ಅವರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಸಹಾಯವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದರೆ ಖಂಡಿತ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಾನೇ ಜ್ವಲಂತ ಸಾಕ್ಷಿ ಎಂದು ಎಂದು ನುಡಿದರು.

ಮೊಯ್ದೀನ್‌ ಅವರ ದುಆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಯೆನೆಪೊಯ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ವೈದ್ಯಕೀಯ ತಜ್ಞ ಪ್ರೊ. ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಮತ್ತಿತರರನ್ನು ಸನ್ಮಾನಿಸಲಾಯಿತು. ಸುಮಾರು 25 ವರ್ಷಗಳಿಂದ ಎಂಡಿ ಹಮೀದ್‌ ಜೊತೆ ಕೆಲಸ ಮಾಡುತ್ತಿರುವ ಮೊಹಮ್ಮದ್‌ ಮೊಯ್ದೀನ್ ಅವರಿಗೆ ಉಮ್ರ ಪ್ರವಾಸ ಟಿಕೆಟ್ ಹಾಗೂ ಕಳೆದ 13 ವರ್ಷಗಳಿಂದ ಕೆಲಸ ಮಾಡುತ್ತಿರುವ ಶೆಖರ್ ಅವರಿಗೆ ಕಾಶಿ-ರಾಮೇಶ್ವರಂ ಪ್ರವಾಸದ ಟಿಕೆಟ್‌ ನೀಡಿ ಗೌರವಿಸಲಾಯಿತು. ವಿದ್ಯಾಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಯಿತು. ಅತಿಥಿಗಳಿಗೆ ಸಸಿಗಳನ್ನು ನೀಡಿ ಸ್ವಾಗತಿಸಲಾಯಿತು.

ಸಂಸ್ಥೆಯ ಸಾಯ್ಹೀಲ್‌ ರೈ ನಿರೂಪಿಸಿದರು. ಮೊಹಮ್ಮದ್‌ ಶರೀಫ್‌ ಧನ್ಯವಾದವಿತ್ತರು. ಮಂಗಳಾದೇವಿ ದೇವಾಲಯದ ಅನುವಂಶಿಕ ಮೊಕ್ತೇಶ್ವರ ಹರೀಶ್ ಐಥಾಳ್‌, ಷರೀಫ್ ಕಾಸರಗೋಡು, ಅಸ್ಗರ್ ಅಲಿ, ಹಮೀದ್‌ ಅವರ ಪತ್ನಿ ಸಫಿಯಾ ಹಮೀದ್, ಪುತ್ರ ನಬೀಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!