ಮುಂಬಯಿ: ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಂಗಣದಲ್ಲಿ ಬಡತನದಿಂದ ಶ್ರೀಮಂತಿಕೆಗೆ ನಡೆದ ಶಿಲ್ಪಿ, ಉದ್ಯಮಿ ಚೆಲ್ಲಡ್ಕ ಕೆ.ಡಿ. ಕುಸುಮೋದರ ಶೆಟ್ಟಿ ಅವರ ಜೀವನ ಮತ್ತು ಸಾಧನೆಗೆ ‘ಕುಸುಮೋದರ’ ಗೌರವ ಗ್ರಂಥ ಅರ್ಪಿಸಲಾಗಿದೆ. ಬಂಟರ ಸಂಘದ ಬಂಟರ ವಾಣಿ ಮಾಸಪತ್ರಿಕೆಯ ಗೌರವ ಸಂಪಾದಕರಾದ ಅಶೋಕ್ ಪಕ್ಕಳ ಗ್ರಂಥವನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಕುಸುಮೋದರ ಶೆಟ್ಟಿ ಹಾಗೂ ಸರಿತಾ ಶೆಟ್ಟಿ ದಂಪತಿಯನ್ನು ವಿಶೇಷ ರೀತಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಸುಮೋದರ ಶೆಟ್ಟಿ ದಂಪತಿಯ ಪುತ್ರ ಜೀಕ್ಷಿತ್ ಕೆ. ಶೆಟ್ಟಿ, ಪುತ್ರಿ ಶಿಖಾ ಎ.ಶೆಟ್ಟಿ, ಅಳಿಯ ಅಭಿಷೇಕ್ ಆನಂದ್ ಶೆಟ್ಟಿ, ಸೊಸೆ ಪ್ರಿಯಾಂಕಾ ಜಿ. ಶೆಟ್ಟಿ,ಮೊಮ್ಮಗ ಖೈಯಾಂಶ್ ಜಿ.ಶೆಟ್ಟಿ ಉಪಸ್ಥಿತರಿದ್ದರು.
ಬಡವರ ಕಣ್ಣೀರು ಒರೆಸಿ ಎಲ್ಲರೊಂದಿಗೆ ಪ್ರೀತಿಯನ್ನು ಹಂಚಿ ಬಾಳುವ ಕುಸುಮೋದರ ಶೆಟ್ಟಿಯವರದ್ದು ಆದರ್ಶ ವ್ಯಕ್ತಿತ್ವ ಎಂದು ಶಶಿಧರ್ ಶೆಟ್ಟಿ ಬರೋಡಾ ಅವರು ಹೇಳಿದರು.ಸಮಾಜಕ್ಕೆ ಕುಸುಮೋದರ ಶೆಟ್ಟಿಯವರದ್ದು ಕಾಲೋಚಿತ- ಕಾಲಾತೀತ ಕರ್ತವ್ಯಗಳಾಗಿವೆ ಎಂದು ಡಾ. ಮಂಜುನಾಥ್ ಕೋಟ್ಯಾನ್ ನುಡಿದರು.
ಕಾರ್ಯಕ್ರಮದಲ್ಲಿ ಕೆ.ಕೆ ಶೆಟ್ಟಿ ಅಹ್ಮದ್ ನಗರ್ ಅವರು ಕುಸುಮೋದರ ಶೆಟ್ಟಿಯವರು ಸಾಧನೆ ಹಾಗೂ ಸಮಾಜಮುಖಿ ಕಾರ್ಯಗಳೊಂದಿಗೆ ತಮ್ಮ ಬದುಕನ್ನು ಸಾರ್ಥಕಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಮರಾಠಿ ಮಣ್ಣಿನಲ್ಲಿ ಸಂಪಾದಿಸಿದ ಆಲ್ಫಾಂಶವನ್ನು ಜಾತಿ ಧರ್ಮ ಭಾಷೆಯನ್ನು ಮೀರಿ ಹಂಚಿ ಬಾಳುವ ದೊಡ್ಡ ಗುಣ ಕುಸುಮೋದರ ಶೆಟ್ಟಿಯವರಲ್ಲಿದೆ ಎಂದು ಶಾಂತರಾಮ್ ಬಿ. ಶೆಟ್ಟಿ ಎಂದರು.
ಚಂದ್ರಶೇಖರ್ ಪಾಲೆತ್ತಾಡಿ, ಕುಸುಮೋದರ ಶೆಟ್ಟಿಯವರ ಗ್ರಂಥ ಮುಂದಿನ ಪೀಳಿಗೆಗೆ ದಾರಿದೀಪ ಎಂದು ಹೇಳಿದರು. ಪ್ರವೀಣ್ ಭೋಜ ಶೆಟ್ಟಿ, ಕುಸುಮೋದರ ಶೆಟ್ಟಿಯವರು ಸಮಾಜಕ್ಕೆ ದೊಡ್ಡ ಶಕ್ತಿ ಎಂದು ತಿಳಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆ.ಡಿ. ಶೆಟ್ಟಿ, ಎಲ್ಲರ ಪ್ರೀತಿ, ಆಶೀರ್ವಾದದಿಂದ ಗೌರವ ಗ್ರಂಥ ಸ್ವೀಕರಿಸುವ ಭಾಗ್ಯ ನನಗೆ ಒದಗಿ ಬಂದಿದೆ ಎಂದರು. ತುಳು ಕನ್ನಡಿಗರ ಸಿದ್ದಿ- ಸಾಧನೆಗಳನ್ನು ದಾಖಲಿಸುವ ಕೆಲಸ ಮಾಡುವುದು ನಮ್ಮೆಲ್ಲರ ದಾಯಿತ್ವ ಎಂದು ಡಾ.ಜಿ.ಎನ್.ಉಪಾಧ್ಯ ಹೇಳಿದರು.
ಪತ್ರಕರ್ತ, ಕುಸುಮೋದರ ಗ್ರಂಥದ ಪ್ರದಾನ ಸಂಪಾದಕ ಡಾ. ದಿನೇಶ್ ಶೆಟ್ಟಿ ರೆಂಜಾಳ ಮಾತನಾಡಿ ಕುಸುಮೋದರ ಶೆಟ್ಟಿಯವರ ಸಿದ್ದಿ ಸಾಧನೆಗಳ ಬಗ್ಗೆ ಗ್ರಂಥವೊಂದು ಬರಬೇಕು ಎಂದು ಹೇಳಿ ಆ ಜವಾಬ್ದಾರಿಯನ್ನು ನನಗೆ ನೀಡಿದ ಗುರುಗಳಾದ ಡಾ. ಜಿ. ಎನ್ ಉಪಾಧ್ಯ ಅವರು ನನ್ನ ಮೇಲಿಟ್ಟ ನಂಬಿಕೆಯನ್ನು ಪ್ರಾಮಾಣಿಕವಾಗಿ, ಶ್ರದ್ದಾಪೂರ್ವಕವಾಗಿ ನಿಭಾಸಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಗೌರವ ಸಂಪಾದಕರಾದ ಡಾ. ಅಶೊಕ್ ಆಳ್ವ ಅವರ ಸಹಕಾರವನ್ನು ಮರೆಯುವಂತಿಲ್ಲ. ಸಕಾಲದಲ್ಲಿ ಲೇಖನಗಳನ್ನು ನೀಡಿದ ಎಲ್ಲಾ ಬಂಧುಗಳಿಗೆ, ಇಂದಿನ ಸಮಾರಂಭ ಮತ್ತು ರೆಂಜಾಳದಲ್ಲಿ ಯಶಸ್ವಿಯಾಗಿ ಕುಸುಮೋತ್ಸವ ನಡೆಸಲು ಸಹಕರಿಸಿದ ಟೀಮ್ ಐಲೇಸಾ ಹಾಗು ನನ್ನೊಂದಿಗಿದ್ದು ಸಹಕರಿಸಿದ ಎಲ್ಲಾ ಮನಸ್ಸುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಸಮಾರಂಭದಲ್ಲಿ ಕುಸುಮೋದರ ಗ್ರಂಥದ ಪ್ರಧಾನ ಸಂಪಾದಕ ಡಾ. ದಿನೇಶ್ ಶೆಟ್ಟಿ ರೆಂಜಾಳರವರನ್ನು ಸನ್ಮಾನಿಸಲಾಯಿತು. ಮಂಗಳೂರು ಯಮುನ ಬಿಲ್ಡರ್ಸ್ ಪುರುಷೋತ್ತಮ್ ಶೆಟ್ಟಿ, ನ್ಯಾಯವಾದಿ ಚಿದಾನಂದ, ಡೊಂಬಿವಲಿ ದ್ವಾರಕಾ ಹೋಟೆಲ್ ವಿಜಿತ್ ಶೆಟ್ಟಿ ಸಂಚಾಲಕರು ವೇಣುಗೋಪಾಲ್ ರೈ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ವಿಶ್ವ ಹಿಂದೂ ಪರಿಷತ್ ನವಿಮುಂಬಯಿ ಅಧ್ಯಕ್ಷ ಸಂಜೀವ ಎನ್ ಶೆಟ್ಟಿ, ಭವಾನಿ ಪೌಂಡೇಶನ್ ಟ್ರಸ್ಟಿ, ವಾಸ್ತು ಮಾರ್ತಾಂಡ ನವೀನ್ ಚಂದ್ರ ಸನಿಲ್, ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ ಕೋಟ್ಯಾನ್, ಡೊಂಬಿವಲಿ ಗೋಪಾಲ್ ಶೆಟ್ಟಿ, ಹೋಟೆಲ್ ಉದ್ಯಮಿ ರವೀಶ್ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಉದಯ್ ಶೆಟ್ಟಿ ಪೇಜಾವರ, ಬೊಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ, ಇನ್ನ ಬೀಡು ರವೀಂದ್ರ ಶೆಟ್ಟಿ, ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು, ಪತ್ರಕರ್ತರು ರವೀಂದ್ರ ಶೆಟ್ಟಿ, ಪ್ರಶಾಂತ್ ಅಮೀನ್, ಅಂಬರ್ ನಾಥ್ ನಿಜಲಿಂಗಪ್ಪ ಶಾಲೆಯ ತಿಲಕ್ ಚೆಲುವಾದಿ, ಮುಖ್ಯೋಪಾಧ್ಯಾಯನಿ ಅನಿತಾ ರಾಜವಳಿ, ಹಾಗೂ ಎಲ್ಲಾ ವಿದ್ಯಾರ್ಥಿ ಗಳನ್ನು, ಚೆಲ್ಲಡ್ಕ ಮನೆತನದ ಸಂಕಪ್ಪ ಶೆಟ್ಟಿ, ಕಾರ್ಕಳ ಮಹೇಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ತೇಜಸ್ವಿ ಶೆಟ್ಟಿ ಮತ್ತು ಕುಸುಮೋದರ ಶೆಟ್ಟಿ ಅವರ ರೇಖಾ ಚಿತ್ರವನ್ನು ಬಿಡಿಸಿರುವ ಆದಿತ್ಯ ಸಾಲಿಯಾನ್ ಮೊದಲಾದ ಅನೇಕ ಗಣ್ಯರನ್ನು ಗೌರವಿಸಲಾಯಿತು. ವಿವಿಧ ಸಾಮಾಜಿಕ ಧಾರ್ಮಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪ್ರತಿಷ್ಠಿತ ಉದ್ಯಮಿಗಳು ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು, ಕುಸುಮೋದರ ಶೆಟ್ಟಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಲಾ ಸಂಘಟಕ ತ್ರಿರಂಗ ಸಂಗಮದ ರೂವಾರಿ ಕರ್ನೂರು ಮೋಹನ್ ರೈ ನಿರೂಪಿಸಿದರು.