ರೈಲ್ವೆ ಹಳಿ ದಾಟುವಾಗ ಗೂಡ್ಸ್‌ ರೈಲು ಡಿಕ್ಕಿ : ವಿದ್ಯಾರ್ಥಿ ಸಾವು

ಬೆಂಗಳೂರು: ಕಿವಿಯಲ್ಲಿ ಹೆಡ್‌ಫೋನ್‌ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೀರಣ್ಣಪಾಳ್ಯ ನಿವಾಸಿ ಶಶಿಕುಮಾರ್‌ (20) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಅ.7 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೇನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು. ವೀರಣ್ಣಪಾಳ್ಯದ ನಿವಾಸಿ ವಾಸುದೇವ್‌ ಅವರ ಪುತ್ರ ಶಶಿಕುಮಾರ್‌, ಯಲಹಂಕದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದ. ಮಂಗಳವಾರ ಬೆಳಗ್ಗೆ ಮನೆಯಿಂದ ಬಸ್‌ ನಿಲ್ದಾಣಕ್ಕೆ ಹೋಗುವಾಗ ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ನಾಗೇನಹಳ್ಳಿ ರೈಲ್ವೆ ಹಳಿ ದಾಟುತ್ತಿದ್ದ. ಈ ವೇಳೆ ಎಲೆಕ್ಟ್ರಿಕ್‌ ಎಂಜಿನ್‌ನ ಗೂಡ್ಸ್‌ ರೈಲು ಬಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಆತ ಮೃತಪಟ್ಟಿದ್ದಾನೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದರು.

error: Content is protected !!