ಉಡುಪಿ: ಖಾಸಗಿ ಬಸ್ ಮತ್ತು ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳವಾರ(ಅ.7) ರಾತ್ರಿ ಅಂಬಾಗಿಲು ಜಂಕ್ಷನ್ ಸಮೀಪದಲ್ಲಿ ನಡೆದಿದೆ.
ಉಡುಪಿ ಪುತ್ತೂರಿನ ಸುಬ್ರಮಣ್ಯ ನಗರ ನಿವಾಸಿ ರವಿ ಪೂಜಾರಿ (44) ಮೃತಪಟ್ಟವರು.
ಬಸ್ ಕುಂದಾಪುರದಿಂದ ಉಡುಪಿ ಕಡೆಗೆ ಆಗಮಿಸುತ್ತಿತ್ತು. ಕಲ್ಸಂಕ – ಅಂಬಾಗಿಲು ಮಾರ್ಗವಾಗಿ ಬಂದ ಬೈಕ್ ಅಂಬಾಗಿನಲ್ಲಿ ತಿರುವು ಪಡೆದು ಸುಬ್ರಹ್ಮಣ್ಯ ನಗರ ಕಡೆ ಹೋಗುವಾಗ ಎದುರಾದ ಬಸ್ಸಿಗೆ ಢಿಕ್ಕಿ ಹೊಡೆಯಿತು.
ಬೈಕ್ ಸವಾರ ರಸ್ತೆಗೆ ಬಿದ್ದು ಬಸ್‌ನ ಅಡಿಗೆ ಸಿಲುಕಿದ್ದರು. ಗಂಭೀರ ಗಾಯವಾಗಿ ರಕ್ತಸ್ರಾವ ಆಗಿದ್ದು ತತ್‌ಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.