ಮೂಡಬಿದ್ರೆ: ಕಾಡಿನಲ್ಲಿ ಅಕ್ರಮ ಗೋವಧೆ ಕೇಂದ್ರ; ಪ್ರಕರಣ ಭೇದಿಸಿದ ಇನ್ಸ್ ಪೆಕ್ಟರ್ ಸಂದೇಶ್ ಪಿಜಿ ಆಂಡ್ ಟೀಮ್!!

ಮೂಡುಬಿದಿರೆ: ಮೂಡುಬಿದಿರೆ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರು ಮೂಡಬಿದ್ರೆ ಗಂಟಾಲ್ ಕಟ್ಟೆಯ ಜಲೀಲ್ ಎಂಬಾತನ ಮನೆ ಹಿಂಭಾಗದ ಗುಡ್ಡೆಯ ಕಾಡಿನಲ್ಲಿ ಜಾನುವಾರುಗಳನ್ನು ವಧಿಸಿ ಮತ್ತು ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದ್ದಾರೆ.

Inspector Sandesh PG

ಪೊಲೀಸ್‌ ದಾಳಿಯ ವೇಳೆ ಜಲೀಲ್ ಕಲ್ಲಬೆಟ್ಟು, ಸಾಹಿಲ್, ಈತನ ಪುತ್ರ ಸೊಹೇಲ್ ಮತ್ತು ಕುದ್ರೋಳಿ ನಿವಾಸಿ ಮೊಹಮ್ಮದ್ ಅಶ್ರಫ್ ಪರಾರಿಯಾಗಿದ್ದಾರೆ.


ಸ್ಥಳದಲ್ಲಿ 50 ಕೆ.ಜಿ. ಜಾನುವಾರು ಮಾಂಸ ಹಾಗೂ ಮಾಂಸ ತಯಾರಣೆಗೆ ಬಳಸುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಮಾಂಸಕ್ಕಾಗಿ ತಂದಿದ್ದ ಮೂರು ಜಾನುವಾರುಗಳನ್ನು ವಶಕ್ಕೆ ಪಡೆದು ಸ್ಥಳೀಯ ಗೋಶಾಲೆಗೆ ಒಪ್ಪಿಸಲಾಗಿದೆ.
ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

error: Content is protected !!