ಹಾಸನ: ಜಾತಿಗಣತಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಶಿಕ್ಷಕಿಯ ಮೇಲೆ ಇದೀಗ ಮತ್ತೆ ಬೀದಿ ನಾಯಿ ದಾಳಿ ಮಾಡಿದ್ದು, ಮೊನ್ನೆ ತಾನೇ ಏಳು ಜನರು ಹಾಗು ಓರ್ವ ಶಿಕ್ಷಕಿಯ ಮೇಲೆ ಬೀದಿನಾಯಿ ದಾಳಿ ಮಾಡಿದ್ದ ಘಟನೆ ನಡೆದಿತ್ತು.
ಇದೀಗ ಸ್ಕೂಟಿಯಲ್ಲಿ ತೇರಳುತ್ತಿದ್ದ ವೇಳೆ ಶಿಕ್ಷಕಿ ಮೇಲೆ ನಾಯಿ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಸ್ಕೂಟಿಯಿಂದ ಕೆಳಗೆ ಬಿದ್ದ ಶಿಕ್ಷಕಿಗೆ ಎಡಗೈ ಮುರಿದು ಹೋಗಿರುವ ಘಟನೆ ಬೇಲೂರು ಹಳೇಗೆಂಡಿಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಲುಕ್ನ ಎನ್ನುವ ಶಿಕ್ಷಕಿಗೆ ಬೀದಿ ನಾಯಿ ದಾಳಿಯಿಂದಾಗಿ ಗಂಭೀರವಾದ ಗಾಯಗಳಾಗಿವೆ. ಸದ್ಯ ತಾಲೂಕು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.