ಮೊಗವೀರ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಮಂಗಳೂರು: ದ.ಕ ಜಿಲ್ಲೆಯ ಮೊಗವೀರ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮವು ಭಾನುವಾರ(ಅ.5) ಕುಳಾಯಿ ಶ್ರೀ ಪಾಂಡುರಂಗ ಮಂದಿರದ ಕುಳೂರು ಮೊಗವೀರ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದಿವಂಗತ ಮೀನಾಕ್ಷಿ ದಾಸ್, ದಿವಂಗತ ಎಚ್. ದಾಸ್, ದಿವಂಗತ ಶಾಂತಮ್ಮ ಅಮೀನ್ ಮತ್ತು ದಿವಂಗತ ಕಾಂಪಾರ ಬಿ. ಅಮೀನ್ ಅವರ ಸ್ಮರಣಾರ್ಥವಾಗಿ ಶ್ರೀಮತಿ ವತ್ಸಲಾ ಯಶ್ ಪಾಲ್ ಹಾಗೂ ಶ್ರೀ ಯಶ್ ಪಾಲ್ ಕೆ. ಕರ್ಕೇರ ದಂಪತಿಗಳು ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಜಿ. ಕೆ. ರಮೇಶ್ (ಮಾಜಿ ಸಂಪಾದಕರು, ಮೊಗವೀರ ಪತ್ರಿಕೆ) ಅವರ ಅಧ್ಯಕ್ಷತೆಯಲ್ಲಿ ಸುಮಾರು 62 ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ಹಾಜರಿದ್ದ ಶ್ರೀ ರಾಜಮೋಹನ್ ರಾವ್ ಕೆ. (ನಿವೃತ್ತ ಪ್ರಾಂಶುಪಾಲರು, ಗೋವಿಂದ ದಾಸ್ ಕಾಲೇಜು, ಸುರತ್ಕಲ್) ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಹೇಗೆ ಆತ್ಮವಿಶ್ವಾಸದಿಂದ ಎದುರಿಸಬೇಕು ಎಂಬ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು.

ವೇದಿಕೆಯಲ್ಲಿ ದಾನಿಗಳಾದ ಶ್ರೀಮತಿ ವತ್ಸಲಾ ಯಶ್ ಪಾಲ್ ಹಾಗೂ ಶ್ರೀ ಯಶ್ ಪಾಲ್ ಕೆ. ಕರ್ಕೇರ ದಂಪತಿ, ತಾರಾನಾಥ್ ಗುರಿಕಾರ ಮತ್ತು ಪುರುಷೋತ್ತಮ್ ಕೊಟ್ಯಾಂಕರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಸುಂದರಾ ದಾಸ್, ಶಿಶಿರ್ ದಾಸ್, ತನುಜಾ ಸುಭೋದ್, ತನುಜಾ ಶಿಶಿರ್, ಅಪೂರ್ವ , ಅಪೇಕ್ಷಾ, ಸುರೇಖಾ ಮೋಹನದಾಸ್,ನವೀನ್ ಕುಮಾರ್ ,ವಿಶ್ವನಾಥ್ ಕರ್ಕೇರ ತಣ್ಣೀರ್ಭವ್ವಿ ಸೇರಿದಂತೆ ಕುಳೂರು ಮೊಗವೀರ ಸಂಘದ ಅನೇಕ ಸದಸ್ಯರು ಭಾಗವಹಿಸಿದರು.

ಕಾರ್ಯಕ್ರಮವನ್ನು ಶ್ರೀ ಸುಭೋದ್ ದಾಸ್ ನಿರೂಪಿಸಿದರು ಮತ್ತು ಶ್ರೀ ಗೋಪಾಲ್ ಶ್ರೀಯಾನ್ ವಂದಿಸಿದರು.

error: Content is protected !!