ಯುವ ನ್ಯಾಯವಾದಿಯ ಸಾವು, ಇನ್ನೋರ್ವ ನ್ಯಾಯವಾದಿ ವಶ

ಕಾಸರಗೋಡು: ಸಿಪಿಎಂ ಕುಂಬಳೆ ಸ್ಥಳೀಯ ಸಮಿತಿಯ ಸದಸ್ಯೆಯಾಗಿದ್ದ ಯುವ ನ್ಯಾಯವಾದಿ ಬತ್ತೇರಿ ನಿವಾಸಿ ರಂಜಿತಾ ಕುಮಾರಿ (30) ತನ್ನ ಕಚೇರಿಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಿಗೆ ನಾಪತ್ತೆಯಾಗಿದ್ದ ನ್ಯಾಯವಾದಿಯೋರ್ವನನ್ನು ತಿರುವನಂತಪುರದಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆತನನ್ನು ಸಮಗ್ರ ವಿಚಾರಣೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಸೆ. 30ರಂದು ಸಂಜೆ ರಂಜಿತಾ ಅವರ ಮೃತದೇಹ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

error: Content is protected !!