ಮಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12 ಪ್ರಾರಂಭವಾಗಿ 24 ಗಂಟೆಗಳಲ್ಲೇ ಉಡುಪಿಯ ರಕ್ಷಿತಾ ಶೆಟ್ಟಿ ಅವರನ್ನು ಏಕಾ ಏಕಿ ಮನೆಯಿಂದ ಹೊರಗೆ ಕಳಿಸಿದ್ದು, ತುಳುನಾಡು ಮಾತ್ರವಲ್ಲ ಅವರ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಜೈ ತುಳುನಾಡು ಅಂದಿದ್ದಕ್ಕೇ ಎಲಿಮಿನೇಟ್ ಮಾಡಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ತುಳುನಾಡಿನಲ್ಲಿ ಬಿಗ್‌ಬಾಸ್ ನೋಡುವವರ ಸಂಖ್ಯೆ ದಿಢೀರ್ ಕಡಿಮೆಯಾಗಿದದ್ದರಿಂದ ಬಿಗ್‌ಬಾಸ್ ಇದೀಗ ರಕ್ಷಿತಾ ಶೆಟ್ಟಿಯವರನ್ನು ಮರಳಿ ಮನೆಗೆ ಕರೆತಂದಿದ್ದಾರೆ.
ಇಂದು ಬಿಡುಗಡೆ ಆಗಿರುವ ಬಿಗ್‌ಬಾಸ್ ಪ್ರೋಮೊನಲ್ಲಿ ರಕ್ಷಿತಾ ಶೆಟ್ಟಿ ಅವರು ಬಿಗ್‌ಬಾಸ್‌ಗೆ ಮರಳಿರುವ ದೃಶ್ಯಗಳು ಇವೆ. ಸುದೀಪ್ ಅವರು ರಕ್ಷಿತಾ ಶೆಟ್ಟಿ ಅವರನ್ನು ಮತ್ತೆ ಬಿಗ್‌ಬಾಸ್‌ಗೆ ಸ್ವಾಗತಿಸಿದ್ದಾರೆ. ಏನು ಹಠಾತ್ತನೆ ಹೊರಗೆ ಕಳಿಸಿಬಿಟ್ಟರಲ್ಲ ಎಂಬ ಸುದೀಪ್ ಅವರ ಪ್ರಶ್ನೆಗೆ, ಹೌದು ಸರ್, ಎಲ್ಲರೂ ಸೇರಿ ಹೊರಗೆ ಹಾಕಿಬಿಟ್ಟರು. ನಾನು ಹೋಗುವಾಗ ಎಲ್ಲರೂ ಬಂದು ಸಮಾಧಾನ ಮಾಡಿದರು ಆದರೆ ಯಾರೂ ಸಹ ನನ್ನ ಪರವಾಗಿ ದಿಟ್ಟ ನಿಲುವು ತೆಗೆದುಕೊಳ್ಳಲಿಲ್ಲ. ಈಗ ಒಳಗೆ ಹೋಗಿ ಕೇಳುತ್ತೀನಿ, ಯಾಕೆ ಹಾಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ, ನನ್ನ ಆಟ ನೋಡದೇ ಏಕೆ ಹೀಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತೀನಿ ಎಂದು ಕೇಳುತ್ತೀನಿ, ಚೆನ್ನಾಗಿ ಆಡುತ್ತೀನಿ’ ಎಂದು ತುಳುಮಿಶ್ರಿತ ಅರೆಬರೆ ಕನ್ನಡದಲ್ಲಿ ತನ್ನ ಇತರ ಸದಸ್ಯರನ್ನು ಟೀಕಿಸಿದ್ದಾರೆ.
ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್‌ಗೆ ರೀ ಎಂಟ್ರಿ ಆಗಲಿದ್ದಾರೆ ಎಂದು ವಾಯ್ಸ್ ಆಫ್ ಪಬ್ಲಿಕ್ ವರದಿ ಬಿತ್ತರಿಸಿತ್ತು.
ರಕ್ಷಿತಾ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಮತ್ತೆ ರೀ ಎಂಟ್ರಿ?