ಹುಲಸೂರ : ಸ್ಕಾರ್ಪಿಯೋ ವಾಹನ ಹಾಗು ಬೈಕ್ ಗಳ ಮಧ್ಯೆ ಭೀಕರ ಅಪಘಾತ ನಡೆದು ಗಾಯಗೊಂಡ ಬೈಕ್ ಸವಾರನನ್ನು ಬ್ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡುವ ಹೋಗುವ ರಸ್ತೆ ಮಧ್ಯೆ ಸಾವನ್ನಪ್ಪಿದ ಘಟನೆ ಇಂದು(ಸೆ.30) ಮಧ್ಯಾಹ್ನ ಭಾಲ್ಕಿ ಲಾತೂರ ರಾಷ್ಟ್ರೀಯ ಹೆದ್ದಾರಿ 172 ರ ಹುಲಸೂರ ಪಟ್ಟಣದ ಸಮೀಪದ ಅಂತರ ಭಾರತಿ ತಾಂಡಾ ಕ್ರಾಸ್ ಬಳಿ ನಡೆದಿದೆ.
ಅಂತರ ಭಾರತಿ ತಾಡಾದ ನಿವಾಸಿ ಸಂದೀಪ (31) ಮೃತ ವ್ಯಕ್ತಿ.
ಸ್ಕಾರ್ಪಿಯೋ ವಾಹನ ಸವಾರರು ತುಳಜಾಪುರ ದೇವಿಯ ದರ್ಶನ ಪಡೆದುಕೊಂಡ ಹುಲಸೂರ ಮಾರ್ಗವಾಗಿ ಬೀದರ್ ಗೆ ಹೋಗುತ್ತಿದ್ದರು. ಈ ವೇಳೆ ಹುಲಸೂರ ಅಂತರಭಾರತಿ ತಾಂಡಾ ಕ್ರಾಸ್ ನ ಮುಖ್ಯ ರಸ್ತೆಯ ಹತ್ತಿರ ಈ ಘಟನೆ ಸಂಭವಿಸಿದೆ.
ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.