ಬೀಗ ಮುರಿದು ಬಾರ್‌ಗೆ ಕನ್ನ ಹಾಕಿ ಹಣ ದೋಚಿದ ಆರೋಪಿ ಬಂಧನ !!

ಬೆಂಗಳೂರು: ರೆಸ್ಟೋರೆಂಟ್‌ನ ಬೀಗ ಮುರಿದು ಮೊಬೈಲ್‌ ಹಾಗೂ ಹಣ ದೋಚಿದ ವ್ಯಕ್ತಿಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 3 ಲಕ್ಷ ರೂ. ಮೌಲ್ಯದ 21 ಮೊಬೈಲ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಜು.12ರಂದು ರೆಸ್ಟೋರೆಂಟ್‌ ಮ್ಯಾನೇಜರ್‌ ಅಂದಿನ ವಹಿವಾಟು ಮುಗಿಸಿ ಬೀಗ ಹಾಕಿಕೊಂಡು ತಡರಾತ್ರಿ 1.30ರ ಸುಮಾರಿಗೆ ಮನೆಗೆ ಹೋಗಿದ್ದರು. ಮರು ದಿನ ಬೆಳಗ್ಗೆ ರೆಸ್ಟೋರೆಂಟ್‌ ತೆರೆಯಲು ಬಂದಾಗ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದು ಗಮನಿಸಿದ್ದರು. ಒಳಗೆ ಹೋಗಿ ನೋಡಿದಾಗ ಸೇಫ್ ಲಾಕರ್‌ ಬಾಕ್ಸ್‌ನಲ್ಲಿದ್ದ 31,870 ರೂ. ಕಳವಾಗಿತ್ತು. ಜೊತೆಗೆ ಮೊಬೈಲ್‌ ಸಹ ಕಳವಾಗಿತ್ತು.

ಜೆ.ಪಿ. ನಗರ ಪೊಲೀಸ್‌ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆರ್‌.ಟಿ. ನಗರ ಪೊಲೀಸ್‌ ಠಾಣೆಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಆರೋಪಿಯು ಕಾರಾಗೃಹದಲ್ಲಿರುವುದನ್ನು ದೃಢಪಡಿಸಿಕೊಂಡು ಆತನನ್ನು ಬಾಡಿವಾರೆಂಟ್‌ ಮೇಲೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಯು ನಗರದ ವಿವಿಧೆಡೆ ಮೊಬೈಲ್‌ ಕದ್ದು ಸ್ನೇಹಿತನಿಗೆ ಕೊಡುತ್ತಿದ್ದ. ಆರೋಪಿಯ ಸ್ನೇಹಿತನಿಂದ 3 ಲಕ್ಷ ರೂ. ಮೌಲ್ಯದ 21 ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!