ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಛಿದ್ರ ಛಿದ್ರ!!

ಬಳ್ಳಾರಿ: ಅಡುಗೆ ಸಿಲಿಂಡರ್​​ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಛಿದ್ರ-ಛಿದ್ರ ಆಗಿರುವ ಆಘಾತಕಾರಿ ಘಟನೆ ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕಿನ ತಾಳೂರು ಗ್ರಾಮದಲ್ಲಿ ನಡೆದಿದೆ.

ಸುಬಾನಿ ಸಾಬ್ ಎನ್ನುವವರ ಮನೆಯಲ್ಲಿ ಹೊಸ ಸಿಲಿಂಡರ್ ಜೋಡಣೆ ವೇಳೆ ಗ್ಯಾಸ್ ಸೋರಿಕೆಯಾಗಿ ಅವಘಡ ನಡೆದಿದ್ದು, ಗ್ಯಾಸ್ ಲೀಕ್​ ಆಗುತ್ತಿದ್ದಂತೆ ಮನೆಯಲ್ಲಿದ್ದ ಕುಟುಂಬಸ್ಥರು ಎಚ್ಚೆತ್ತು ಹೊರಬಂದ ಕಾರಣ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಪೋಟದ ತೀವ್ರತೆಗೆ ಮನೆ ಸಂಪೂರ್ಣ ಛಿದ್ರ ಛಿದ್ರವಾಗಿದ್ದು, ಪಕ್ಕದ ಮನೆಯ ಗೋಡೆಯೂ ಕುಸಿದು ಬಿದ್ದಿದೆ.

ಮನೆ ಮಾಲೀಕ ಸುಬಾನಿ ಸಾಬ್ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ತೋರಣಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

error: Content is protected !!