ಶ್ರೀಲಂಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ !

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಮ್ ನಲ್ಲಿ ನಡೆಯುತ್ತಿರುವ ಏಷ್ಯ ಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಷ್ಯಾಕಪ್​ನ ಸೂಪರ್-4 ವಿಭಾಗದ ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ ಸುಲಭವಾಗಿ ವಿಜಯ ಸಾಧಿಸಿದೆ. ಇದರಿಂದ ಭಾರತ ತಂಡಕ್ಕೆ ಮತ್ತೊಂದು ಗೆಲುವು ಒಲಿದು ಬಂದಿದೆ.

SURYA_TILAK

ಟಾಸ್ ಗೆದ್ದ ಶ್ರೀಲಂಕಾ ತಂಡವು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಅಭಿಷೇಕ್ ಶರ್ಮಾ ಅವರ ಮಿಂಚಿನ ಅರ್ಧಶತಕ ಮತ್ತು ತಿಲಕ್ ವರ್ಮಾ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 202 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಬ್ಯಾಟರ್​ಗಳ ಘರ್ಜನೆ ಜೋರಾಗಿಯೇ ಇತ್ತು. ಆರಂಭಿಕ ಬ್ಯಾಟರ್ ಪಥುಮ್ ನಿಸಾಂಕ ಅಮೋಘ ಶತಕ ಬಾರಿಸಿ ಶ್ರಿಲಂಕಾಗೆ ಗೆಲುವು ತಂದು ಕೊಟ್ಟೇ ಬಿಟ್ಟಿತು ಎಂದುಕೊಂಡಿದ್ದರು. ಆದರೆ ಕೊನೆಯಲ್ಲಿ ಮ್ಯಾಚ್ ಡ್ರಾ ಆಗಿತ್ತು. ಶ್ರೀಲಂಕಾ 5 ವಿಕೆಟ್‌ ಗಳಿಗೆ 202 ರನ್ ಗಳಿಸಿ ಪಂದ್ಯ ‘ಟೈ’ ಆಯಿತು.

ಹೀಗಾಗಿ ಸೂಪರ್ ಓವರ್​ ಅನ್ನು ಆಡಿಸಲಾಯಿತು. ಸೂಪರ್ ಓವರ್​ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬ್ಯಾಟಿಂಗ್ ಮಾಡಲು ಹರಸಾಹಸ ಪಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಕೇವಲ 2 ರನ್ ಬಿಟ್ಟುಕೊಟ್ಟರು. ಭಾರತದ ಸೂರ್ಯಕುಮಾರ್ ಯಾದವ್ ತಾವೆದುರಿಸಿದ ಮೊದಲ ಎಸೆತದಲ್ಲಿ 3 ರನ್ ಗಳಿಸಿ, ಭಾರತ ತಂಡಕ್ಕೆ ಸೂಪರ್ ಗೆಲುವು ತಂದುಕೊಟ್ಟರು.

error: Content is protected !!