ನಾಯಿ ತಪ್ಪಿಸಲು ಹೋಗಿ ಉರುಳಿದ ಸ್ಲೀಪರ್ ಬಸ್ : 15 ಪ್ರಯಾಣಿಕರಿಗೆ ಗಾಯ

ರಾಯಚೂರು: ಸಾತ್ ಮೈಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸ್ಲೀಪರ್ ಬಸ್ ಪಕ್ಕದ ಜಮೀನಿಗೆ ಉರುಳಿಬಿದ್ದ ಪರಿಣಾಮ 15 ಪ್ರಯಾಣಿಕರು ಗಾಯಗೊಂಡ ಘಟನೆ ಇಂದು(ಸೆ.26) ಬೆಳಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ರಾಯಚೂರು | ಕೆಎಸ್ಸಾರ್ಟಿಸಿ ಬಸ್ ಪಲ್ಟಿ: 15 ಪ್ರಯಾಣಿಕರಿಗೆ ಗಾಯ

ರಸ್ತೆಯಲ್ಲಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ. ಒಬ್ಬ ಪ್ರಯಾಣಿಕನ ಕಾಲು ಸಿಲುಕಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜಿಟಿ ಜಿಟಿ ಮಳೆಯ ನಡುವೆಯೇ ರಕ್ಷಣೆ ಕಾರ್ಯಾಚರಣೆ ಮಾಡಿದ್ದಾರೆ. ಬಳಿಕ ಚಿಕಿತ್ಸೆಗೆಂದು ಅಂಬುಲೆನ್ಸ್ ಮೂಲಕ ರಿಮ್ಸ್ ಗೆ ಕಳುಹಿಸಲಾಗಿದೆ.

ಬಸ್ ದಾವಣಗೆರೆಯಿಂದ ರಾಯಚೂರು ಕಡೆ ಬರುತ್ತಿತ್ತು. ಕ್ರೇನ್ ಮೂಲಕ ಬಸ್ ಎತ್ತಲಾಗಿದೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!