ಮಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಮಹಿಳಾ ಪ್ರಧಾನ ತುಳು ಚಲನಚಿತ್ರ “ಮೀರಾ” ಇದೀಗ OTTಗೆ ಲಗ್ಗೆ ಇಡಲಿದೆ. ಅಸ್ತ್ರ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಈ ಚಿತ್ರ, ಸೆಪ್ಟೆಂಬರ್ 26 (ಶುಕ್ರವಾರ) ರಂದು “ಟಾಕೀಸ್ OTT ಆ್ಯಪ್” ನಲ್ಲಿ ಬಿಡುಗಡೆಯಾಗಲಿದೆ ಎಂದು ಅಸ್ತ್ರ ಗ್ರೂಪ್ ಸಿಇಒ, ಚಿತ್ರ ನಿರ್ಮಾಪಕ ಲಂಚುಲಾಲ್ ಮಾಹಿತಿ ನೀಡಿದ್ದಾರೆ.
ಚಿತ್ರವು ಪ್ರೀಮಿಯರ್ ಶೋದಲ್ಲೇ ಯಶಸ್ಸು ಕಂಡು ಜನಮನ ಗೆದ್ದಿತ್ತು. ನಾಯಕಿಯಾಗಿ ಇಶಿತಾ ಶೆಟ್ಟಿ ಅಭಿನಯಿಸಿದ್ದು, ಜೊತೆಗೆ ಅರವಿಂದ್ ಬೋಳಾರ್, ಜೆ.ಪಿ. ತೂಮಿನಾಡು, ಪ್ರಕಾಶ್ ತೂಮಿನಾಡು, ಸ್ವರಾಜ್ ಶೆಟ್ಟಿ, ಮಂಜು ರೈ ಮೂಳೂರು, ರೂಪಾಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಬೇಬಿ ಲಕ್ಷ್ಯ ಸೇರಿದಂತೆ ಹಲವಾರು ಕಲಾವಿದರು ಕಾಣಿಸಿಕೊಂಡಿದ್ದಾರೆ ಎಂದರು.
ಕಥೆ-ಚಿತ್ರಕಥೆ-ನಿರ್ದೇಶನ ಅಶ್ವಥ್ ಮಾಡಿದ್ದು, ಅಜಯ್ ಕೆ.ಎಸ್. ಛಾಯಾಗ್ರಹಣ, ಜಾಬಿನ್ಸ್ ಸೆಬಾಸ್ಟಿಯನ್ ಸಂಕಲಿಸಿದ್ದು, ರಾಜು ಜಯಪ್ರಕಾಶ್ ಸಂಗೀತ ನೀಡಿದ್ದಾರೆ. “ಟಾಕೀಸ್ OTT ಆಪ್” ಮೂಲಕ ತುಳು ಚಲನಚಿತ್ರಗಳನ್ನು ಸುಲಭವಾಗಿ ಜನತೆಗೆ ತಲುಪಿಸುವುದೇ ನಮ್ಮ ಉದ್ದೇಶ ಎಂದು ಲಂಚುಲಾಲ್ ತಿಳಿಸಿದರು.
ಈ ಸಂದರ್ಭದಲ್ಲಿ ಯತೀಶ್ ಪೂಜಾರಿ, ಮಂಜು ರೈ ಮೂಳೂರು, ಅಶ್ವಥ್, ಸ್ಮಿತೇಶ್ ಎಸ್. ಬಾರ್ಯ ಉಪಸ್ಥಿತರಿದ್ದರು.
ಮನೆಮಂದಿ “ಮೀರಾ” ಸಿನಿಮಾ ವೀಕ್ಷಿಸಿ ಪ್ರೋತ್ಸಾಹಿಸಿ -ಶಾಸಕ ವೇದವ್ಯಾಸ ಕಾಮತ್