ಬಂಟ್ವಾಳ ಗೋಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಒಬ್ಬ ಬಂಧನ, 9 ದನಗಳ ರಕ್ಷಣೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಬೆಟ್ಟು ಗ್ರಾಮದ ಕೆರೆ ಬಳಿಯ ಗೋಹತ್ಯೆ ಪ್ರಕರಣವನ್ನು ಪೊಲೀಸರು ಸೆ.21ರಂದು ರಾತ್ರಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ 9 ಗೋವುಗಳನ್ನು ರಕ್ಷಿಸಿದ್ದಾರೆ.
ಮೂಲತಃ ಮುಲ್ಕಿ ನಿವಾಸಿ ಪ್ರಸ್ತುತ ಸುರತ್ಕಲ್ ಕೃಷ್ಣಾಪುರ‌ ನಿವಾಸಿ ತೌಸೀಫ್ ಸೆರೆ ಸಿಕ್ಕಿದ್ದು, ಬಂಟ್ವಾಳದ ಸಂಗಬೆಟ್ಟು ನಿವಾಸಿ ನಾಸಿರ್ ಅಲಿಯಾಸ್ ಹುಸೇನಬ್ಬ, ರಶೀದ್ ಹಾಗೂ ಇತರರು ಪರಾರಿಯಾಗಿದ್ದಾರೆ.

ಘಟನಾ ಸ್ಥಳದಲ್ಲಿ ಸುಮಾರು 6 ವರ್ಷ ಪ್ರಾಯದ ಹಸುವನ್ನು ವಧೆ ಮಾಡಲಾಗಿದ್ದು, ಜೊತೆಗೆ ವಧೆಗೆ ಕಟ್ಟಿ ಹಾಕಿದ್ದ ಮತ್ತೊಂದು 9 ದನಗಳನ್ನು ಪೊಲೀಸರು ರಕ್ಷಿಸಿ ಗೋಶಾಲೆಗೆ ಹಸ್ತಾಂತರಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನೂ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ರ 143/2025 ಅಡಿಯಲ್ಲಿ, ಕಲಂ 303(2), 307 – ಬಿಎನ್ಎಸ್, ಕಲಂ 4, 7, 12 – ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಕಾಯ್ದೆ 2020, ಕಲಂ 11(ಡಿ) – ಪ್ರಾಣಿ ಹಿಂಸೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಬಂಧಿತ ತೌಸೀಫ್ ಅವರನ್ನು ಬಂಟ್ವಾಳ ಎಸಿಜೆ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

error: Content is protected !!